ಮಂಗಳವಾರ, ಏಪ್ರಿಲ್ 7, 2020
19 °C

ರಜನಿ ಚಿತ್ರ, ಧನುಷ್‌ ರಿಮೇಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

1981ರಲ್ಲಿ ಬಿಡುಗಡೆಯಾಗಿದ್ದ ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ಸೂಪರ್‌ಸ್ಟಾರ್‌ ರಜನಿಕಾಂತ್‌ ಅಭಿಯನದ ತಮಿಳಿನ ಸೂಪರ್‌ ಹಿಟ್‌ ‘ನೆಟ್ರಿಕ್ಕನ್‌’ ಚಿತ್ರವನ್ನು ಅವರ ಅಳಿಯ ಧನುಷ್‌ ರಿಮೇಕ್‌ ಮಾಡಲಿದ್ದಾರೆ ಎಂಬ ಸುದ್ದಿ ಕಾಲಿವುಡ್‌ನಿಂದ ಹೊರಬಿದ್ದಿದೆ. 

ರಜನಿ ನಿರ್ವಹಿಸಿದ ಪಾತ್ರಗಳನ್ನು ಧನುಷ್‌ ನಿರ್ವಹಿಸುತ್ತಿದ್ದು, ತಂದೆ ಮತ್ತು ಮಗನಾಗಿ ದ್ವಿಪಾತ್ರಗಳಲ್ಲಿ ಮಿಂಚಲಿದ್ದಾರೆ. ‘ನೆಟ್ರಿಕ್ಕನ್‌’ ರಿಮೇಕ್‌ ಚಿತ್ರದ ತಂಡಕ್ಕೆ ಕೀರ್ತಿ ಸುರೇಶ್‌ ಕೂಡ ಸೇರಿಕೊಳ್ಳಲಿದ್ದಾರೆ ಎಂಬ ಗಾಳಿಸುದ್ದಿಗಳು ಹರಿದಾಡುತ್ತಿವೆ.

ರಜಿನಿ ಅಭಿಯನದ ‘ದರ್ಬಾರ್‌’ ಜತೆಯಲ್ಲಿಯೇ ಬಿಡುಗಡೆಯಾದ ಧನುಷ್‌ ನಟನೆಯ ‘ಪಟ್ಟಾಸ್‌’ ಚಿತ್ರ ಕೂಡ ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ಗೆಲುವು ತಂದುಕೊಟ್ಟಿದೆ. ಪಟ್ಟಾಸ್‌ ನಂತರ ಧನುಷ್‌ ‘ನೆಟ್ರಿಕನ್‌’ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.   

‘ನೆಟ್ರಿಕನ್‌’ ಮೂಲ ಚಿತ್ರದಲ್ಲಿ ರಜನಿಕಾಂತ್‌ ಜೊತೆ ನಾಯಕಿಯಾಗಿ ಕೀರ್ತಿ ಸುರೇಶ್‌ ಅವರ ತಾಯಿ ಮೇನಕಾ ನಟಿಸಿದ್ದರು. ಚಿತ್ರಕ್ಕೆ ವಿಸು ಸಂಭಾಷಣೆ ಇತ್ತು. ಹಿರಿಯ ಚಿತ್ರನಿರ್ದೇಶಕ ಕೆ. ಬಾಲಚಂದರ್‌, ಎಸ್‌. ಪಿ ಮುತ್ತುರಾಮನ್‌ ಈ ಚಿತ್ರವನ್ನು ನಿರ್ದೇಶಿಸಿದ್ದರು.

ಈಗ  ಆಸಕ್ತಿಕರ ವಿಚಾರವೆಂದರೆ ಈ ರಿಮೇಕ್‌ ಚಿತ್ರದಲ್ಲಿ ನಾಯಕಿಯಾಗಿ ಕೀರ್ತಿ ಸುರೇಶ್‌ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ‘ನೆಟ್ರಿಕ್ಕನ್‌’ ರಿಮೇಕ್‌ ಚಿತ್ರ ಸೆಟ್ಟೇರಲಿದೆ ಎಂಬ ಸುದ್ದಿ ವೈರಲ್‌ ಆಗಿದ್ದಾಗಿನಿಂದ ಈ ಚಿತ್ರದ ನಾಯಕಿ ಸ್ಥಾನಕ್ಕೆ ಕೀರ್ತಿ ಸುರೇಶ್‌ ಅವರನ್ನೇ ಆಯ್ಕೆ ಮಾಡುವಂತೆ ಅಭಿಮಾನಿಗಳೂ ಒತ್ತಾಯ ಮಾಡುತ್ತಿದ್ದರಂತೆ.

ಕೀರ್ತಿ ಸುರೇಶ್‌ ಹಾಗೂ ಧನುಷ್‌ ಈ ಹಿಂದೆ ‘ತೊಡರಿ’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆ ಚಿತ್ರದಲ್ಲಿ ಅವರ ಕೆಮಿಸ್ಟ್ರಿ ಚೆನ್ನಾಗಿ ಕೆಲಸ ಮಾಡಿತ್ತು. ಆದರೆ ಈ ಹೊಸ ಚಿತ್ರದಲ್ಲಿ ಅವರಿಬ್ಬರು ಜೊತೆಯಾಗಿ ನಟಿಸಲಿದ್ದಾರೆಯೇ ಎಂಬ ಬಗ್ಗೆ ಅಧಿಕೃತ ಸುದ್ದಿ ಹೊರಬಿದ್ದಿಲ್ಲ.

ಇದೇ ವೇಳೆ ರಜನಿಕಾಂತ್‌ ಅಭಿನಯದ ಮತ್ತೊಂದು ಸೂಪರ್ ಹಿಟ್‌ ಸಿನಿಮಾ ‘ಮಾಪಿಳ್ಳೈ’ ಚಿತ್ರವನ್ನೂ ರಿಮೇಕ್‌ ಮಾಡಲು ಧನುಷ್‌ ಆಲೋಚನೆ ಮಾಡುತ್ತಿದ್ದಾರಂತೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು