ಸಿಂಬು ಮದುವೆಯಂತೆ!

ಗುರುವಾರ , ಜೂನ್ 20, 2019
24 °C
ನಟ ಸಿಂಬು ಮದುವೆ

ಸಿಂಬು ಮದುವೆಯಂತೆ!

Published:
Updated:
Prajavani

ತಮಿಳಿನ ಖ್ಯಾತ ನಟ ಸಿಂಬು ಶೀಘ್ರದಲ್ಲಿಯೇ ಮದುವೆಯಾಗುತ್ತಿದ್ದಾರೆ... ಹೀಗೊಂದು ಸುದ್ದಿ ಬಹುದಿನಗಳಿಂದ ಹರಿದಾಡುತ್ತಿದೆ. 

ಈ ಬಗ್ಗೆ ಸ್ಪಷ್ಟನೆ ನೀಡಿರುವ ಸ್ವತಃ ಸಿಂಬು, ‘ಸದ್ಯಕ್ಕೆ ಮದುವೆಯಾಗುವ ಪ್ರಶ್ನೆಯೇ ಇಲ್ಲ’ಎಂದು ತಮ್ಮ ಮದುವೆ ಸುದ್ದಿಯನ್ನು ಅಲ್ಲಗಳೆದಿದ್ದಾರೆ.

‘ಈ ಕ್ಷಣದಲ್ಲಿ ನಾನು ತುಂಬಾ ಸಂತಸ ದಲ್ಲಿದ್ದೇನೆ. ನನ್ನ ಕುಟುಂಬ ವಿಸ್ತಾರವಾಗುತ್ತಿದೆ. ತಮ್ಮ ಮತ್ತು ತಂಗಿ ವಿವಾಹವಾಗಿದ್ದಾರೆ. ನಮ್ಮ ಫ್ಯಾಮಿಲಿ ಫೋಟೊ ದೊಡ್ಡದಾಗಿದೆ. ಕುಟುಂಬದ ಪ್ರೀತಿಯಲ್ಲಿ ಮೀಯುತ್ತಿದ್ದೇನೆ’ ಎಂದು ಸಿಂಬು ಪತ್ರಕರ್ತರೆದುರು ಹೇಳಿಕೊಂಡಿದ್ದಾರೆ. 

ಸದ್ಯಕ್ಕೆ ನನಗೆ ಮದುವೆಯಾಗುವ ಯೋಚನೆಯೇ ಇಲ್ಲ. ಸಿನಿಮಾದ ಕಡೆ ಗಮನ ಹರಿಸುತ್ತಿದ್ದೇನೆ. ಗಾಳಿಸುದ್ದಿಗಳಿಗೆ ತಲೆ ಕೆಡಿಸಿ ಕೊಳ್ಳದಿರಿ ಎಂದು ಅಭಿಮಾನಿಗಳಿಗೆ ಕರೆ ನೀಡಿರುವ ಸಿಂಬು, ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಬಗ್ಗೆ ಕಿಡಿಕಾರಿದ್ದಾರೆ.

‘ನಾನು ಯಾವುದಾದರೂ ಸಿನಿಮಾ ನಿರ್ಮಾಪಕ ಅಥವಾ ನಿರ್ದೇಶಕರ ಬಳಿಗೆ ಹೋಗಿದ್ದೇನೆ ಎಂದರೆ ಅದು ಹೊಸ ಪ್ರಾಜೆಕ್ಟ್‌ಗಾಗಿ ಅಂತ ಅರ್ಥವಲ್ಲ. ಸಿನಿಮಾವೇ ವೃತ್ತಿಯಾಗಿರುವ ನನಗೆ ಅದರ ಭಾಗವಾಗಿ ನಿರ್ದೇಶಕರು, ನಿರ್ಮಾಪಕರೊಂದಿಗೆ ಚರ್ಚೆ ಮಾಡಬೇಕಾಗುತ್ತದೆ. ಹೊಸ ಪ್ರಾಜೆಕ್ಟ್‌ಗಳಿದ್ದಲ್ಲಿ ಅದನ್ನು ಅಧಿಕೃತವಾಗಿ ಆಯಾ ಬ್ಯಾನರ್, ನಿರ್ಮಾಪಕರು ಇಲ್ಲವೇ ನಿರ್ದೇಶಕರೇ ಘೋಷಿಸುತ್ತಾರೆ. ನಟನಾಗಿ ಇದನ್ನೆಲ್ಲಾ ಸ್ಪಷ್ಟಪಡಿಸುವುದು ನನ್ನ ಜವಾಬ್ದಾರಿ’ಎಂದು ಸಿಂಬು ವಿವರಿಸಿದ್ದಾರೆ.

ಕನ್ನಡದ ‘ಮಫ್ತಿ’ ತಮಿಳು ರಿಮೇಕ್‌ನಲ್ಲಿ ಸಿಂಬು ನಾಯಕನಾಗಿ ಅಭಿನಯಿಸುತ್ತಿದ್ದಾರೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !