ಸೋಮವಾರ, ಆಗಸ್ಟ್ 2, 2021
19 °C

ಮಾನಾಡು– ಲಿರಿಕಲ್‌ ಹಾಡು ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಮಿಳು ನಟ ಸಿಲಂಬರಸನ್ ಟಿ.ಆರ್. ನಟನೆಯ ‘ಮಾನಾಡು’ ಚಿತ್ರದ ಲಿರಿಕಲ್‌ ಹಾಡಿನ ವಿಡಿಯೊ ಇತ್ತೀಚೆಗೆ ಬಿಡುಗಡೆಗೊಂಡಿದೆ. ಕನ್ನಡ, ತಮಿಳು ಸಹಿತ ಐದು ಭಾಷೆಗಳಲ್ಲಿ ಈ ಚಿತ್ರ ಸಿದ್ಧಗೊಳ್ಳುತ್ತಿದೆ.

ಮದುವೆ ಸಂಭ್ರಮದಲ್ಲಿ ನವ ಜೋಡಿಗಳ ಎದುರು ‘ಮಹರೆಜೈಲಾ ಅಲ್ಲಾ ಅಲ್ಲಾ ಎಲ್ಲಾ ಎಲ್ಲಾ’ ಎಂಬ ಹಾಡಿನಲ್ಲಿ ನಾಯಕ ಮತ್ತು ನಾಯಕಿ ಸಹನೃತ್ಯಗಾರರೊಂದಿಗೆ ಹೆಜ್ಜೆ ಹಾಕುವ ಗೀತೆಯ ವಿಡಿಯೊ ಇದಾಗಿದೆ. ಮದನ್‌ಕರ್ಕಿ ಸಾಹಿತ್ಯಕ್ಕೆ ಸಂಗೀತ ಸಂಯೋಜಕ ಯುವನ್‌ ಶಂಕರ್‌ರಾಜ ಹಾಡಿಗೆ ಧ್ವನಿಯಾಗಿದ್ದಾರೆ. ಸಹಗಾಯಕರಾಗಿ ರಿಜ್ವಾನ್, ರಾಜಭವತರಣಿ ಇದ್ದಾರೆ.

ರಾಜಕೀಯ ಕಥಾ ವಸ್ತು ಹೊಂದಿರುವ ಈ ಚಿತ್ರದ ಕಥೆ ರಚನೆ-ನಿರ್ದೇಶನ ವೆಂಕಟ್‌ಪ್ರಭು, ಛಾಯಾಗ್ರಹಣ ರಿಚರ್ಡ್ ಎಂ. ನಾಥನ್, ಸಂಕಲನ ಪ್ರವೀಣ್ ಕೆ.ಎಲ್., ಸಾಹಸ ಸ್ವಂಟ್‌ಶಿವ, ನೃತ್ಯ ರಾಜುಸುಂದರಂ ಅವರದಾಗಿದೆ. ಸುರೇಶ್‌ಕಮತ್‌ಚಿ ಅವರು ‘ವಿ ಹೌಸ್ ಪ್ರೊಡಕ್ಷನ್’ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರಕ್ಕೆ ಕಲ್ಯಾಣಿ ಪ್ರಿಯದರ್ಶನ್ ನಾಯಕಿ. ಮತ್ತೊಂದು ಮುಖ್ಯ ಪಾತ್ರದಲ್ಲಿ ಎಸ್.ಜೆ.ಸೂರ್ಯ ಉಳಿದಂತೆ ವೈ.ಜಿ.ಮಹೇಂದ್ರನ್, ವಾಗಿ ಚಂದ್ರಶೇಖರ್, ಅಂಜನಕೀರ್ತಿ, ಎಸ್.ಎ.ಚಂದ್ರಶೇಖರ್, ಉದಯ, ಮನೋಜ್.ಕೆ.ಭಾರತಿ, ಪ್ರೇಮ್‌ಜಿ ಅಮರೆನ್, ಡ್ಯಾನಿಯೆಲ್, ಕರುಣಾಕರನ್ ನಟಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು