ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರೇಮಲೋಕ’ದಲ್ಲಿ ಮುಳುಗಿದ ರವಿ

Published 21 ಮಾರ್ಚ್ 2024, 14:10 IST
Last Updated 21 ಮಾರ್ಚ್ 2024, 14:10 IST
ಅಕ್ಷರ ಗಾತ್ರ

‘ಪ್ರೇಮಲೋಕ’ ಎರಡನೇ ಭಾಗದ ಬಗ್ಗೆ ನಟ ರವಿಚಂದ್ರನ್‌ ಹಲವು ಕುತೂಹಲಕಾರಿ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ಸಿನಿಮಾದಲ್ಲಿ 25 ಹಾಡುಗಳಿದ್ದು, 40ಕ್ಕೂ ಅಧಿಕ ಸೆಟ್‌ಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ ಎಂದಿದ್ದಾರೆ ಕ್ರೇಜಿಸ್ಟಾರ್‌. 

ಬ್ಯಾಂಗಳೂರ್‌ ಮೂವೀಸ್ ನಿರ್ಮಾಣದಲ್ಲಿ ಸ್ಪೆನ್ಸರ್‌ ಮ್ಯಾಥ್ಯೂ ನಿರ್ದೇಶನ ಮಾಡುತ್ತಿರುವ ರವಿಚಂದ್ರನ್‌–ಅಮೈರ ಜೋಡಿ ನಟಿಸಿರುವ ‘ತಪಸ್ಸಿ’ ಸಿನಿಮಾದ ಮುಹೂರ್ತ ಸಮಾರಂಭ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ರವಿಚಂದ್ರನ್‌, ‘ನಾನು ಪ್ರೇಮಲೋಕ–2ರಲ್ಲಿ ಮುಳುಗಿ ಹೋಗಿದ್ದೇನೆ. 25 ಹಾಡುಗಳು ಸಿದ್ಧವಾಗಿವೆ. ಮೇ 30 ನನ್ನ ಜನ್ಮದಿನ. ಆವತ್ತಿನಿಂದ ಎರಡನೇ ಭಾಗದ ಚಿತ್ರೀಕರಣ ಆರಂಭಿಸುತ್ತೇನೆ. ಮನೋರಂಜನ್‌ ಹಾಗೂ ನಾನು ಪ್ರಮುಖ ಪಾತ್ರಗಳಲ್ಲಿದ್ದು, ನಾಯಕಿಯ ಆಯ್ಕೆ ಇನ್ನೂ ಆಗಿಲ್ಲ. ವಿಕ್ರಮ್‌ ಕೂಡಾ ಸಿನಿಮಾದಲ್ಲಿ ಇರಲಿದ್ದಾನೆ. ಇನ್ನೊಂದಿಷ್ಟು ಪಾತ್ರಗಳ ಆಯ್ಕೆ ಆಗಬೇಕಿದೆ. 40–50 ಸೆಟ್‌ಗಳಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಸಿಕ್ಕಾಪಟ್ಟೆ ಖರ್ಚು ಖಂಡಿತಾ ಇದೆ. ಇದು ಕಡಿಮೆ ಬಜೆಟ್‌ ಸಿನಿಮಾವಂತೂ ಅಲ್ಲ. ಪ್ರೇಮಲೋಕ ಕಾಮನ್‌ ಮ್ಯಾನ್‌ ಜೊತೆ ನಡೆಯುವ ಕಥೆ’ ಎಂದರು. 

‘ತಪಸ್ಸಿ’ ಬಗ್ಗೆ ವಿವರ ನೀಡಿ, ‘ಈಗಾಗಲೇ ಸಿನಿಮಾದ ಚಿತ್ರೀಕರಣ ಆರಂಭವಾಗಿ, ಉಳಿದ ಪಾತ್ರಗಳ ಶೂಟಿಂಗ್‌ ಪೂರ್ಣಗೊಂಡಿದೆ. ನನ್ನ ಪಾತ್ರದ ಚಿತ್ರೀಕರಣವಷ್ಟೇ ಬಾಕಿ ಇದೆ. ‘ರವಿ ಬೋಪಣ್ಣ’ ಚಿತ್ರದಿಂದ ನನಗೆ ಮ್ಯಾಥ್ಯೂ ಪರಿಚಯವಿದೆ. ಅವರಿಗೆ ಸಿನಿಮಾ ಮೇಲಿರುವ ಬದ್ಧತೆ ನನಗೆ ಈ ಸಿನಿಮಾ ಒಪ್ಪಿಕೊಳ್ಳುವಂತೆ ಮಾಡಿತು’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT