ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಂ ರವಿ ಜೊತೆತಾಪ್ಸಿ ರೊಮಾನ್ಸ್‌

Last Updated 26 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ನಾಲ್ಕು ವರುಷಗಳ ನಂತರ ನಟಿ ತಾಪ್ಸಿ ಪನ್ನು ತಮಿಳು ಸಿನಿಮಾವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಅಹ್ಮದ್‌ ನಿರ್ದೇಶನದ ಹೊಸ ಸಿನಿಮಾದಲ್ಲಿ ಜಯಂ ರವಿ ಜೊತೆ ಅವರು ರೊಮಾನ್ಸ್‌ ಮಾಡಲಿದ್ದಾರೆ.

ಜಯಂ ರವಿ ಅವರ ‘ಕೋಮಲಿ’ ಚಿತ್ರವು ಬಿಡುಗಡೆಯಾಗಿ ಬಾಕ್ಸಾಫೀಸಿನಲ್ಲಿ ಭಾರಿ ಯಶಸ್ಸು ಕಾಣುತ್ತಿದೆ. ಈ ಹಾಸ್ಯಚಿತ್ರದ ಬಗ್ಗೆ ಕೆಲ ಟೀಕೆಗಳು ಕೇಳಿಬಂದಿದ್ದರೂ, ಪ್ರೇಕ್ಷಕರ ಮನ ಗೆಲುವಲ್ಲಿ ಯಶಸ್ವಿಯಾಗಿದೆ.

ಈಗ ಅವರು ಹೊಸ ಸಿನಿಮಾಕ್ಕೆ ತಯಾರಿ ನಡೆಸಿದ್ದು, ಈ ಚಿತ್ರದಲ್ಲಿ ನಾಯಕಿಯಾಗಿ ತಾಪ್ಸಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಇದೇ ಮೊದಲ ಬಾರಿಗೆ ತಾಪ್ಸಿ ಹಾಗೂ ಜಯಂ ರವಿ ಒಟ್ಟಿಗೆ ನಟಿಸುತ್ತಿದ್ದಾರೆ.

ಕಾಲಿವುಡ್‌ನಲ್ಲಿ ತಾಪ್ಸಿ 2015ರಲ್ಲಿ ಬಿಡುಗಡೆಯಾದ ‘ವೈ ರಾಜಾ ವೈ’ ಚಿತ್ರದಲ್ಲಿ ನಟಿಸಿದ್ದರು. ‘ಗೇಮ್‌ ಓವರ್‌’ ಚಿತ್ರದಲ್ಲೂ ನಟಿಸಿದ್ದರು. ಈ ಚಿತ್ರ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ನಂತರ ತಮಿಳು ಸಿನಿಮಾಗಳಿಂದ ಬ್ರೇಕ್‌ ಪಡೆದುಕೊಂಡು ಹಿಂದಿ ಸಿನಿಮಾಗಳತ್ತ ಗಮನ ಹರಿಸಿದ್ದರು. ಈಗ ಈ ಚಿತ್ರದ ಮೂಲಕ ವಾಪಸ್ಸಾಗಿದ್ದಾರೆ.

ತಾಪ್ಸಿ, ಅಕ್ಷಯ್‌ಕುಮಾರ್‌ ಜೊತೆಗೆ ನಟಿಸಿರುವ ‘ಮಿಷನ್‌ ಮಂಗಲ್‌’ ಸಿನಿಮಾವು ಬಾಕ್ಸಾಫೀಸಿನಲ್ಲಿ ಯಶಸ್ಸು ಕಂಡಿದೆ. ಹಿಂದಿಯ ‘ತಡ್ಕ’ ಹಾಗೂ ‘ಸಾಂದ್‌ ಕಿ ಆಂಖ್‌’ ಚಿತ್ರದಲ್ಲೂ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT