ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ತೇಜಸ್ವಿಗೂ ಕಾಡಿದ್ದ ಕಾಸ್ಟಿಂಗ್ ಕೌಚ್

Last Updated 15 ಜೂನ್ 2020, 10:40 IST
ಅಕ್ಷರ ಗಾತ್ರ

ನಟಿ ತೇಜಸ್ವಿ ಮಡಿವಾಡ ಮೂಲತಃ ಮಾಡೆಲ್‌. ಆಕೆ ತೆಲುಗು ಚಿತ್ರರಂಗ ಪ್ರವೇಶಿಸಿದ್ದು ‘ಸೀತಮ್ಮ ವಕಿಟ್ಲೊ ಸಿರಿಮಲ್ಲೆ ಚೆಟ್ಟು’ ಚಿತ್ರದ ಮೂಲಕ. ನೃತ್ಯ ಶಿಕ್ಷಕಿಯಾಗಿದ್ದ ಆಕೆ ಬೆಳ್ಳಿತೆರೆಯ ಮೋಹಕ್ಕೆ ಸಿಲುಕಿದ್ದು ಕೂಡ ಆಕಸ್ಮಿಕ. ತೆಲುಗಿನ ಬಿಗ್‌ಬಾಸ್‌ ಸೀಸನ್‌ 2ನ ಪ್ರವೇಶಿಸಿದ್ದ ಆಕೆ ಅಲ್ಲಿ 42 ದಿನಗಳ ಕಾಲ ಸ್ಪರ್ಧಿಗಳೊಟ್ಟಿಗೆ ಪೈಪೋಟಿ ನೀಡಿದ್ದರು.

ತೆಲುಗಿನ ಹಲವು ಸಿನಿಮಾಗಳಲ್ಲಿ ನಟಿಸಿರುವ ಹೆಗ್ಗಳಿಕೆ ಆಕೆಯದ್ದು. ಪ್ರಸ್ತುತ ಆಕೆ ‘ಕಮಿಟ್‌ಮೆಂಟ್‌’ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಈ ಚಿತ್ರದ ಪ್ರಚಾರದ ವೇಳೆ ಆಕೆ ಚಿತ್ರರಂಗದಲ್ಲಿರುವ ‘ಪಾತ್ರಕ್ಕಾಗಿ ಪಲ್ಲಂಗ’ದ (ಕಾಸ್ಟಿಂಗ್ ಕೌಚ್) ಬಗ್ಗೆ ಮಾತನಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಆಕೆಯ ಪ್ರಕಾರ ಚಿತ್ರರಂಗದಲ್ಲಿ ಕಾಸ್ಟಿಂಗ್‌ ಕೌಚ್‌ ಪ್ರಮಾಣ ಶೇಕಡ 90ರಷ್ಟು ಇದೆಯಂತೆ. ಆಕೆಗೂ ನಟನೆಯ ವೇಳೆ ಇದರ ಅನುಭವವಾಗಿದೆಯಂತೆ. ‘ಹೊಂದಾಣಿಕೆ ಮಾಡಿಕೊಂಡರೆ ಸಿನಿಮಾಗಳಲ್ಲಿ ಸಾಕಷ್ಟು ಅವಕಾಶ ನೀಡುವುದಾಗಿ ಹಲವು ಮಂದಿ ನನಗೂ ಕೇಳಿದ್ದಾರೆ. ಹಾಗಾಗಿಯೇ, ನಾನು ಕಳೆದ ವರ್ಷವೇ ಚಿತ್ರರಂಗದಿಂದ ಹೊರಹೋಗಲು ನಿರ್ಧರಿಸಿದೆ’ ಎಂದು ಹೇಳಿದ್ದಾರೆ.

‘ಮುಂಬೈ ಮೂಲದ ನಟಿಯರು ಕಾಸ್ಟಿಂಗ್ ಕೌಚ್‌ಗೆ ಬಹುಬೇಗ ಹೊಂದಿಕೊಳ್ಳುತ್ತಾರೆ. ಇದಕ್ಕಾಗಿ ಅವರು ಮಾನಸಿಕವಾಗಿಯೂ ಸಿದ್ಧರಾಗಿರುತ್ತಾರೆ. ಹಾಗಾಗಿ, ಸಿನಿಮಾಗಳಲ್ಲಿ ಬಹುಬೇಗನೇ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಆದರೆ, ದಕ್ಷಿಣ ಭಾರತ ಚಿತ್ರರಂಗದ ನಟಿಯರು ಇದಕ್ಕೆ ಹೊಂದಿಕೊಳ್ಳುವುದಿಲ್ಲ. ಹಾಗಾಗಿಯೇ, ಅವರಿಗೆ ಅವಕಾಶಗಳು ಕಡಿಮೆ’ ಎಂದು ಹೇಳಿದ್ದಾರೆ ತೇಜಸ್ವಿ.

ತೇಜಸ್ವಿಗೂ ಒಬ್ಬ ಬಾಯ್‌ಫ್ರೆಂಡ್‌ ಇದ್ದನಂತೆ. ಆತನೊಟ್ಟಿಗೆ ಸಪ್ತಪದಿ ತುಳಿಯಲು ಆಕೆ ನಿರ್ಧರಿಸಿದ್ದರಂತೆ. ಆದರೆ, ಚಿತ್ರರಂಗದಲ್ಲಿ ಕಾಡುತ್ತಿರುವ ಕಾಸ್ಟಿಂಗ್ ಕೌಚ್ ಪರಿಣಾಮ ನಮ್ಮಿಬ್ಬರ ಪ್ರೀತಿಯು ವೈಫಲ್ಯ ಕಂಡಿತು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT