ಅರೆ! ಇದೇನಪ್ಪಾ ಲಯನ್ ಕಿಂಗ್ ಸಿನಿಮಾಕ್ಕೆ ಬ್ರಹ್ಮಾನಂದಂ, ಆಲಿ ದನಿಗೂಡಿಸುವುದೇ? ಇದು ಆಂಗ್ಲಭಾಷೆಯ ಚಿತ್ರವಲ್ಲವೇ... ಎಂದು ಗೊಂದಲಕ್ಕೆ ಒಳಗಾಗಬೇಡಿ. ಜುಲೈ 9ಕ್ಕೆ ತೆರೆ ಕಾಣಲಿರುವ ಈ ಸಿನಿಮಾವನ್ನು ಇಂಗ್ಲಿಷ್, ಹಿಂದಿ, ತಮಿಳು ಹಾಗೂ ತೆಲುಗಿನಲ್ಲೂ ನೋಡಬಹುದಾಗಿದೆ.

ತೆಲುಗಿನ ಹಾಸ್ಯ ದಿಗ್ಗಜರಾದ ಬ್ರಹ್ಮಾನಂದಂ ಹಾಗೂ ಅಲಿ ಅವರು ಲಯನ್ ಕಿಂಗ್ನ ಪುಂಬಾ ಹಾಗೂ ಟಿಮೊನ್ ಪಾತ್ರಗಳಿಗೆ ದನಿ ನೀಡಲಿದ್ದಾರೆ.

‘ಡಿಸ್ನಿ ಸಿನಿಮಾಗಳನ್ನು ಇಡೀ ಕುಟುಂಬ ಒಟ್ಟಾಗಿ ಕುಳಿತು ನೋಡಿ ಎಂಜಾಯ್ ಮಾಡಬಹುದು. ನನ್ನ ಮಕ್ಕಳು ಲಯನ್ ಕಿಂಗ್ನ ಅಭಿಮಾನಿಗಳು. ಸಿನಿಮಾದಲ್ಲಿ ಪುಂಬಾಗೆ ಧ್ವನಿ ನೀಡಿರುವುದು ವಿಭಿನ್ನ ಹಾಗೂ ಮೋಜಿನ ಅನುಭವವನ್ನು ನೀಡಿದೆ. ಈ ಸಿನಿಮಾವನ್ನು ತೆಲುಗು ಸಿನಿಮಾ ಪ್ರೇಕ್ಷಕರ ಮುಂದೆ ಪ್ರಸ್ತುತ ಪಡಿಸಲು ನಾನು ಎದುರು ನೋಡುತ್ತಿದ್ದೇನೆ’ ಎಂದು ಬ್ರಹ್ಮಾನಂದಂ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ಟಿಮೂನ್ ಪಾತ್ರಕ್ಕೆ ಧ್ವನಿಗೂಡಿಸಲಿರುವ ಅಲಿ ‘ನನ್ನ ಮಕ್ಕಳಿಗಾಗಿ ಈ ಚಿತ್ರದಲ್ಲಿ ನಾನು ಪಾಲುದಾರನಾಗಿದ್ದೇನೆ. ಖಂಡಿತ ನನ್ನ ಅಭಿಮಾನಿಗಳು ನನ್ನ ಈ ಹೊಸ ಅವತಾರವನ್ನು ಮೆಚ್ಚುತ್ತಾರೆ ಎಂಬುದು ನನ್ನ ನಂಬಿಕೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.