ಥಾರ್‌ ಮಗಳ ಹೆಸರು ಇಂಡಿಯಾ!

ಗುರುವಾರ , ಜೂಲೈ 18, 2019
23 °C

ಥಾರ್‌ ಮಗಳ ಹೆಸರು ಇಂಡಿಯಾ!

Published:
Updated:
Prajavani

ಎವೆಂಜರ್ಸ್‌ ಸರಣಿ ಚಿತ್ರಗಳ ‘ಥಾರ್‌‘ ಪಾತ್ರಧಾರಿ ಹಾಲಿವುಡ್‌ ನಟ ಆಸ್ಟ್ರೇಲಿಯಾದ ಕ್ರಿಸ್‌ ಹೆಮ್ಸ್‌ವರ್ಥ್‌ ತಮ್ಮ ಮಗಳಿಗೆ ‘ಇಂಡಿಯಾ‘ ಎಂದು ಹೆಸರಿಟ್ಟಿದ್ದಾರೆ. 

ನೆಟ್‌ಫ್ಲಿಕ್ಸ್‌ ಚಿತ್ರ ‘ಢಾಕಾ’ ಶೂಟಿಂಗ್‌ಗಾಗಿ ಕಳೆದ ವರ್ಷ ಭಾರತಕ್ಕೆ ಬಂದಿದ್ದ ಕ್ರಿಸ್‌ ಹಲವು ದಿನ ಅಹಮದಾಬಾದ್‌ ಮತ್ತು ಮುಂಬೈನಲ್ಲಿ ನಡೆದಿದ್ದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಭಾರತೀಯರು ತೋರಿದ ಪ್ರೀತಿಗೆ ಪ್ರತಿಯಾಗಿ ಅವರು ತಮ್ಮ ಮಗಳಿಗೆ ‘ಇಂಡಿಯಾ ರೋಸ್‌’ ಎಂದು ನಾಮಕರಣ ಮಾಡಿದ್ದಾರೆ. 

ಪತಿಯ ಜತೆ ಭಾರತಕ್ಕೆ ಬಂದಿದ್ದ ಕ್ರಿಸ್‌ ಪತ್ನಿ ಎಲ್ಸಾ ಅವರಿಗೂ ಭಾರತ ಎಂದರೆ ಅಚ್ಚುಮೆಚ್ಚಂತೆ. ಇಲ್ಲಿಗೆ ಬಂದಾಗ ಎಲ್ಸಾ ಗರ್ಭಿಣಿಯಾಗಿದ್ದರು. ಇಲ್ಲಿಂದ ಮರಳಿದ ಬಳಿಕ ಹುಟ್ಟಿದ ಮಗಳಿಗೆ ಭಾರತದ ನೆನಪಿಗಾಗಿ ಇಂಡಿಯಾ ಎಂದು ಹೆಸರಿಡಲು ದಂಪತಿ ತೀರ್ಮಾನಿಸಿದರು. ಸದ್ಯದಲ್ಲಿಯೇ ತೆರೆಗೆ ಬರುತ್ತಿರುವ ಕಾಮಿಡಿ–ಆ್ಯಕ್ಷನ್‌ ಥ್ರಿಲ್ಲರ್‌ ‘ಮೆನ್ ಇನ್‌ ಬ್ಲಾಕ್‌–ಇಂಟರ್‌ನ್ಯಾಷನಲ್‌’ ಹಾಲಿವುಡ್‌ ಚಿತ್ರದ ಪ್ರಮೋಷನ್‌ ವೇಳೆ ಕ್ರಿಸ್‌ ಈ ಸಂಗತಿ ತಿಳಿಸಿದರು. ಕ್ರಿಸ್‌ –ಎಲ್ಸಾ ದಂಪತಿಗೆ ಇಂಡಿಯಾ ಅಲ್ಲದೆ, ಸಶಾ ಮತ್ತು ತ್ರಿಸ್ಟನ್‌ ಎಂಬ ಇಬ್ಬರು ಪುತ್ರರಿದ್ದಾರೆ. 

ಈ ಹಿಂದೆ ಬ್ರಿಟಿಷ್‌ ನಟಿ ಎಮ್ಮಾ ಫರ್ಗುಸನ್‌ ಕೂಡ ಮಗಳಿಗೆ ಇಂಡಿಯಾ ಎಂದು ಹೆಸರಿಟ್ಟಿದ್ದರು. ಭಾರತೀಯ ಮೂಲದ ಸುಶೀಲ್‌ ಸೂದ್ ಎಂಬುವರನ್ನು ಮದುವೆಯಾದ ಕೆನಡಾದ ಗಾಯಕಿ ಸಾರಾ ಮ್ಯಾಕ್ಲಾನ್‌ ಮತ್ತು ಹಾಲಿವುಡ್‌ ನಟಿ ಮಾರ್ಸೋಲ್‌ ತಮ್ಮ ಪುತ್ರಿಯರಿಗೆ ಇಂಡಿಯಾ ಎಂದು ಹೆಸರಿಟ್ಟಿದ್ದಾರೆ.

Post Comments (+)