ಶನಿವಾರ, ಜೂಲೈ 4, 2020
28 °C

ರಗಡ್ ಲುಕ್‍ನಲ್ಲಿ ದರ್ಶನ್: 'ರಾಬರ್ಟ್‌' ಪೋಸ್ಟರ್‌ಗೆ 'D BOSS' ಅಭಿಮಾನಿಗಳು ಫಿದಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ‘ರಾಬರ್ಟ್‌’ ಚಿತ್ರ ತಂಡ ರಂಜಾನ್ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದೆ.

ರಾಬರ್ಟ್ ಚಿತ್ರ ತಂಡ  ಹೊಸ ಫೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಮುಸ್ಲಿಂ ಭಾಂದವರಿಗೆ ಈದ್ ಮುಬಾರಕ್ ತಿಳಿಸಿದೆ.

ಬಿಡುಗಡೆಯಾಗಿರುವ ಹೊಸ ಫೋಸ್ಟರ್‌ನಲ್ಲಿ ದರ್ಶನ್ ರಗಡ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ದಚ್ಚು ಅಭಿಮಾನಿಗಳು ‌ಈ ಫೋಸ್ಟರ್‌ಗೆ ಫಿದಾ ಆಗಿದ್ದಾರೆ. ಈಗಾಗಲೇ ಫೋಸ್ಟರ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

‘ರಾಬರ್ಟ್‌’ ದರ್ಶನ್‌ ನಟನೆಯ 53ನೇ ಚಿತ್ರ. ಇದಕ್ಕೆ ತರುಣ್‌ ಸುಧೀರ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ರಾಬರ್ಟ್‌ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂಬ ಸುಳಿವನ್ನು ಚಿತ್ರತಂಡ ನೀಡಿದೆ. 

 ‘ರಾಬರ್ಟ್’ ಸಿನಿಮಾದ ಪೋಸ್ಟರ್‌ಗಳು, ಟೀಸರ್‌ಗಳು ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿವೆ. 
ಭದ್ರಾವತಿ ಮೂಲದ ಕನ್ನಡತಿ ಆಶಾ ಭಟ್‌ ನಾಯಕಿಯಾಗಿದ್ದಾರೆ. ತೆಲುಗಿನ ಖ್ಯಾತ ಖಳನಟ ಜಗಪತಿಬಾಬು, ವಿನೋದ್‌ ಪ್ರಭಾಕರ್‌ ಬಣ್ಣ ಹಚ್ಚಿದ್ದಾರೆ. ಉಮಾಪತಿ ಶ್ರೀನಿವಾಸ್‌ ಬಂಡವಾಳ ಹೂಡಿದ್ದು, ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು