ಬುಧವಾರ, ಮೇ 25, 2022
26 °C

ನಾಗ ಚೈತನ್ಯ–ಸಮಂತಾ ವಿಚ್ಛೇದನದ ಬಗ್ಗೆ ನಾನು ಮಾತಾಡಿಲ್ಲ: ನಾಗಾರ್ಜುನ ಸ್ಪಷ್ಟನೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ‘ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ವಿಚ್ಛೇದನದ ಕುರಿತು ನಾಗಾರ್ಜುನ ಅವರು ಮೌನ ಮುರಿದಿದ್ದಾರೆ’ ಎಂಬ ವರದಿಗಳನ್ನು ನಟ ನಾಗಾರ್ಜುನ ಅವರೇ ನಿರಾಕರಿಸಿದ್ದಾರೆ.

‘ನನ್ನ ಹೇಳಿಕೆಯನ್ನು ಉಲ್ಲೇಖಿಸಿದ ಎಲೆಕ್ಟ್ರಾನಿಕ್‌ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ವರದಿಗಳು ಸಂಪೂರ್ಣ ಸುಳ್ಳು ಮತ್ತು ಅಸಂಬದ್ಧ. ವದಂತಿಗಳನ್ನು ಸುದ್ದಿಯಾಗಿ ವರದಿ ಮಾಡದಂತೆ ಮಾಧ್ಯಮ ಮಿತ್ರರನ್ನು ನಾನು ವಿನಂತಿಸುತ್ತೇನೆ’ ಎಂದು ಅವರು ಟ್ವೀಟ್‌ ಮಾಡಿ ಸ್ಪಷ್ಟನೆ ನೀಡಿದ್ದಾರೆ.

ಮೊದಲು ವಿಚ್ಛೇದನ ಕೇಳಿದ್ದು ಸಮಂತಾ ಅವರೇ ಎಂದು ನಾಗಾರ್ಜುನ ಅವರು ಹೇಳಿದ್ದಾರೆ ಎಂದು ಈ ಮೊದಲು ವರದಿಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು