ಬುಧವಾರ, ಜನವರಿ 27, 2021
16 °C

ಕರ್ನಾಟಕದಲ್ಲೂ ಚಿತ್ರಮಂದಿರ ಭರ್ತಿ?: ಸಿಎಂಗೆ ಚಿತ್ರೋದ್ಯಮದ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಆಸನ ಭರ್ತಿಗೆ ಅವಕಾಶ ಕೊಡಬೇಕು ಎಂದು ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌. ಜೈರಾಜ್‌ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ.

ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಪೂರ್ಣ ಪ್ರಮಾಣದ ಆಸನ ಭರ್ತಿ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ಅವರು ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿದರು ಎಂದು ಜೈರಾಜ್‌ ಹೇಳಿದರು.


ಜೈರಾಜ್‌

ಜೈರಾಜ್‌ ಮಾತನಾಡಿ, ‘ಶೇ 50ರ ಆಸನ ಭರ್ತಿಯ ಕಾರಣದಿಂದಾಗಿ ಹೊಸ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಶೇ 50ರಷ್ಟು ಆಸನ ಭರ್ತಿ ಮಾಡಿ ಪ್ರದರ್ಶನ ಮಾಡಿದರೆ ನಮ್ಮ ವೆಚ್ಚವೇನೂ ಕಡಿಮೆ ಆಗುವುದಿಲ್ಲ. ಅದು ಶೇ 100ರ ಪ್ರದರ್ಶನದಷ್ಟೇ ಇರುತ್ತದೆ. ನಿರ್ಮಾಪಕರೂ ಚಿತ್ರಗಳನ್ನು ಬಿಡುಗಡೆ ಮಾಡದೇ ಹೋದರೆ ಪ್ರದರ್ಶನದಲ್ಲಿ ನಿರಂತರತೆ (ಒಂದು ಚಿತ್ರದ ಪ್ರದರ್ಶನ ಅವಧಿ ಮುಗಿದ ಬಳಿಕ ಇನ್ನೊಂದು ಚಿತ್ರ) ಕಾಯ್ದುಕೊಳ್ಳಲು ಅಸಾಧ್ಯ. ಒಟ್ಟಿನಲ್ಲಿ ಪರಿಸ್ಥಿತಿ ಹೀಗೇ ಮುಂದುವರಿದರೆ ಚಿತ್ರೋದ್ಯಮದ ಚೇತರಿಕೆ ಅಸಾಧ್ಯ’ ಎಂದು ಅವರು ಹೇಳಿದರು.

ಮಕರ ಸಂಕ್ರಾಂತಿ ಬಳಿಕ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನ ಭರ್ತಿಗೆ ಸರ್ಕಾರ ಅವಕಾಶ ಕೊಡಬಹುದು ಎಂಬ ನಿರೀಕ್ಷೆಯನ್ನು ಚಿತ್ರೋದ್ಯಮದ ಮೂಲಗಳು ವ್ಯಕ್ತಪಡಿಸಿವೆ. ಕೆಜಿಎಫ್‌ ಚಾಪ್ಟರ್–2 ಸಹಿತ ದೊಡ್ಡ ಬಜೆಟ್‌, ನಟರನ್ನೊಳಗೊಂಡ ಹಲವಾರು ಚಿತ್ರಗಳು ಬಿಡುಗಡೆಗೆ ಕಾದು ನಿಂತಿವೆ. ಮಾರುಕಟ್ಟೆ (ಪೂರ್ಣ ಪ್ರಮಾಣದ ಪ್ರೇಕ್ಷಕರು) ಬೆಳವಣಿಗೆ ನೋಡಿಕೊಂಡೇ ಮುಂದಿನ ಹೆಜ್ಜೆ ಇಡಲು ನಿರ್ಮಾಪಕರು ಆಲೋಚಿಸಿದ್ದಾರೆ.

ಅನ್‌ಲಾಕ್‌ 5.0 ಬಳಿಕ ಕನ್ನಡದಲ್ಲಿ ಆ್ಯಕ್ಟ್‌–1978, ಕಿಲಾಡಿಗಳು ಚಿತ್ರಗಳು ಬಿಡುಗಡೆಯಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು