ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Thug Life | ರಗಡ್‌ ಆಗಿ ಬಂದ ರಂಗರಾಯ: ಕಮಲ್‌ ಹಾಸನ್‌–ಮಣಿರತ್ನಂ ಜೋಡಿಯ ಹೊಸ ಮೋಡಿ

Published 7 ನವೆಂಬರ್ 2023, 13:00 IST
Last Updated 7 ನವೆಂಬರ್ 2023, 13:00 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಕಮಲ್‌ ಹಾಸನ್‌–ಮಣಿರತ್ನಂ ಜೋಡಿ ಮತ್ತೊಂದು ಹೊಸ ಸಿನಿಮಾವನ್ನು ಘೋಷಣೆ ಮಾಡಿದೆ.

ಚಿತ್ರದ ಟೈಟಲ್‌ ಅನ್ನು ವಿಡಿಯೊ ಮೂಲಕ ಬಿಡುಗಡೆ ಮಾಡಲಾಗಿದೆ. ಚಿತ್ರಕ್ಕೆ ‘ಥಗ್ ಲೈಪ್‌‘ ಎಂದು ಹೆಸರಿಡಲಾಗಿದೆ. ಸಿನಿಮಾಗೆ ಚಿತ್ರರಂಗದ ಮಾಸ್ಟರ್‌ ಮಣಿರತ್ನಂ ಅವರ ನಿರ್ದೇಶನವಿದೆ. ಎ.ಆರ್‌.ರೆಹಮಾನ್‌ ಸಂಗೀತ ಚಿತ್ರಕ್ಕಿದೆ. 

ಉದಯ್‌ನಿಧಿ ಸ್ಟಾಲಿನ್‌ ಅವರ ರೆಡ್‌ಗೈಂಟ್‌ ಮೂವೀಸ್‌ ಮತ್ತು ಕಮಲ್‌ ಹಾಸನ್‌ ಅವರ ರಾಜ್‌ ಕಮಲ್‌ ಫಿಲಂಸ್‌ ಒಟ್ಟಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ. ಕಮಲ್‌ ಹಾಸನ್‌ ಅಭಿಮಾನಿಗಳಿಗೆ ಈ ಹೊಸ ಸಿನಿಮಾದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.

ಬಯಲು, ಬಯಲು, ಕಣ್ಣು ಹಾಯಿಸದಷ್ಟೂ ಕಾಣುವಷ್ಟು ಖಾಲಿ ಪ್ರದೇಶ. ಅಲ್ಲಿ ರಂಗರಾಯ ಶಕ್ತಿವೇಲ್ (ಕಮಲ್ ಹಾಸನ್) ನಿಂತಿದ್ದಾನೆ. ಅವನ ಎದುರಿಗೆ ವೈರಿಗಳ ಗುಂಪು ಇದೆ. ಅವರ ಮುಂದೆ ಶಕ್ತಿವೇಲ್ ತನ್ನ ಜೀವನದ ಕಥೆ ಹೇಳಿಕೊಳ್ಳುತ್ತಾನೆ. ಇದನ್ನು ‘ಥಗ್ ಲೈಪ್‌‘ ಟೈಟಲ್‌ ವಿಡಿಯೊದಲ್ಲಿ ತೊರಿಸಲಾಗಿದೆ.

ಮಾಸ್‌ ಲುಕ್‌ ಕಮಲ್‌ ಹಾಸನ್‌ ಅಭಿಮಾನಿಗಳಿಗೆ ಇಷ್ಟವಾಗಿದ್ದು, ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT