ಶನಿವಾರ, ಜನವರಿ 25, 2020
28 °C

ತಿರುಪತಿ ತಿಮ್ಮಪ್ಪನ ಬಳಿ ಶಿವರಾಜ್‌ಕುಮಾರ್‌ ಕೋರಿದ್ದೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಹ್ಯಾಟ್ರಿಕ್‌ ಹೀರೊ’ ಶಿವರಾಜ್‌ಕುಮಾರ್‌ ಮತ್ತು ಗೀತಾ ಶಿವರಾಜ್‌ಕುಮಾರ್‌ ದಂಪತಿಗೆ ದೇವರ ಮೇಲೆ ಅಪಾರ ಭಕ್ತಿ. ಈ ಇಬ್ಬರೂ ಕೆಲವು ದಿನಗಳ ಹಿಂದೆ ಧರ್ಮಸ್ಥಳದ ಶ್ರೀಮಂಜುನಾಥಸ್ವಾಮಿ ಸನ್ನಿಧಿಯಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನವ ದಂಪತಿಗೆ ಶುಭ ಕೋರಿದ್ದರು.

ಮತ್ತೊಂದೆಡೆ ಶಿವಣ್ಣ ಅವರ ಎಲ್ಲಾ ಸಿನಿಮಾ ಕಾರ್ಯಕ್ರಮಗಳಲ್ಲೂ ಗೀತಾ ಅವರು ಭಾಗಿಯಾಗುತ್ತಾರೆ. ಕೆಲವೊಮ್ಮೆ ವಿದೇಶಗಳಲ್ಲಿ ನಡೆಯುವ ಶೂಟಿಂಗ್‌ ವೇಳೆಯೂ ಅವರು ಶಿವಣ್ಣನ ಜೊತೆ ಇರುತ್ತಾರೆ.

‘ಆಯುಷ್ಮಾನ್‌ಭವ’ ಚಿತ್ರದ ಬಿಡುಗಡೆಯ ಬಳಿಕ ಶಿವಣ್ಣ ‘ಭಜರಂಗಿ 2’ ಚಿತ್ರದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಬೆಂಗಳೂರಿನಲ್ಲಿ ಈ ಚಿತ್ರದ ಶೂಟಿಂಗ್‌ ನಡೆಯುತ್ತಿದೆ. ಈ ನಡುವೆಯೇ ಬಿಡುವು ಮಾಡಿಕೊಂಡು ಶಿವರಾಜ್‌ಕುಮಾರ್ ದಂಪತಿ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ತೆರಳಿದೆ. ಗೀತಾ ಅವರು ತಿಮ್ಮಪ್ಪನಿಗೆ ತಮ್ಮ ಮುಡಿ ಅರ್ಪಿಸಿದ್ದಾರೆ.

ಈ ಕುರಿತು ಶಿವಣ್ಣ ಅವರು, ‘2019ರಲ್ಲಿ ನಮ್ಮ ಎಲ್ಲಾ ಕಷ್ಟಗಳಲ್ಲಿ ಕೈಹಿಡಿದ ಆ ತಿರುಪತಿ ತಿಮ್ಮಪ್ಪನಿಗೆ ನಮ್ಮ ಅರ್ಪಣೆ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಅವರ ಈ ಪೋಸ್ಟ್‌ಗೆ ‘ನಿಮ್ಮ ಸುಖ, ಸಂತೋಷ, ಆರೋಗ್ಯವೇ ಅಭಿಮಾನಿಗಳ ಭಾಗ್ಯ’ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು