ಸೋಮವಾರ, ಆಗಸ್ಟ್ 8, 2022
24 °C

ಟಿಎಂಸಿ ಸಂಸದೆ ನುಸ್ರತ್‌ ಜಹಾನ್‌ ಬೇಬಿ ಬಂಪ್‌ ಫೋಟೊ ವೈರಲ್‌

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Twitter

ನವದೆಹಲಿ: ತೃಣಮೂಲ ಕಾಂಗ್ರೆಸ್‌ನ ಸಂಸದೆ ಮತ್ತು ಬೆಂಗಾಲಿ ನಟಿ ನುಸ್ರತ್‌ ಜಹಾನ್‌ ಅವರ ಫೋಟೊವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು, ಗರ್ಭಿಣಿಯಂತೆ ಕಾಣಿಸುತ್ತಿರುವ ಬಗ್ಗೆ ಚರ್ಚೆಗಳು ಶುರುವಾಗಿವೆ.

ನಟಿ ನುಸ್ರತ್‌ ಜಹಾನ್‌ ಗಂಡನ ಜೊತೆ ಸಂಬಂಧ ಮುರಿದುಕೊಂಡಿರುವ ಬಗ್ಗೆ, ಬೇರೆ ಪ್ರೇಮ ಸಂಬಂಧ ಹೊಂದಿರುವ ಬಗ್ಗೆ ಸಾಕಷ್ಟು ಗುಸುಗುಸು ನಡೆಯುತ್ತಿರುವ ಬೆನ್ನಲ್ಲೇ ವೈರಲ್‌ ಆಗಿರುವ ಫೋಟೊ ಹೊಸದೊಂದು ಕಥೆ ಹೇಳುತ್ತಿದೆ. ಸ್ನೇಹಿತೆಯರ ಜೊತೆಗೆ ನಿಂತಿರುವ ನುಸ್ರತ್‌ ಜಹಾನ್‌ ಅವರ ಗ್ರೂಪ್‌ ಫೋಟೊ ಎಲ್ಲಾ ಊಹಾಪೋಹಗಳಿಗೆ ಅಂತಿಮ ವಿರಾಮ ಹೇಳಿದೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.

ನಟಿ ನುಸ್ರತ್‌ ಬಿಳಿಯ ಉಡುಗೆ ಧರಿಸಿರುವ ಫೋಟೊದಲ್ಲಿ ಬೇಬಿ ಬಂಪ್‌ ಹೊಂದಿರುವಂತೆ ಕಾಣಿಸುತ್ತಿದ್ದು, ಜೊತೆಯಲ್ಲಿ ನುಸ್ರತ್‌ ಅವರ ಆತ್ಮೀಯ ಗೆಳತಿ, ಬೆಂಗಾಲಿ ನಟಿ ಶ್ರವಂತಿ ಚಟರ್ಜಿ ಇದ್ದಾರೆ.

ಒಂದು ವಾರದ ಹಿಂದೆ ನುಸ್ರತ್‌ ಜಹಾನ್‌ ತನ್ನ ಗಂಡ ನಿಖಿಲ್‌ ಜೈನ್‌ ಅವರ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿರುವುದಾಗಿ ಘೋಷಿಸಿದ್ದರು. ಜೂನ್‌ 9ರಂದು 7 ಅಂಶಗಳಿರುವ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು. ಇದರಲ್ಲಿ ನಿಖಿಲ್‌ ಜೊತೆಗಿನ ವಿವಾಹವು ಟರ್ಕಿಷ್‌ ಕಾನೂನಿನ ಪ್ರಕಾರ ನಡೆದಿದೆ. ಭಾರತದಲ್ಲಿ ಅದಕ್ಕೆ ಮಾನ್ಯತೆ ಇಲ್ಲ ಎಂದು ತಿಳಿಸಿದ್ದರು.

ತಮಗೆ ಸೇರಿದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ತಮ್ಮ ಅರಿವಿಗೆ ಬಾರದಂತೆ ಹಲವು ಖಾತೆಗಳಿಂದ ವ್ಯವಹಾರಗಳನ್ನು ನಡೆಸಲಾಗಿದೆ ಎಂದು ತಮ್ಮ ಹೇಳಿಕೆಯಲ್ಲಿ ಗಂಡನ ವಿರುದ್ಧ ದೂರಿದ್ದರು.

ನುಸ್ರತ್‌ ಜಹಾನ್‌ ಮತ್ತು ನಿಖಿಲ್‌ ಜೈನ್‌ ಜೂನ್‌ 19, 2019ರಂದು ಟರ್ಕಿಯಲ್ಲಿ ವಿವಾಹವಾಗಿದ್ದರು. ಮದುವೆಗೂ ಮುನ್ನ ಇಬ್ಬರು ಕೆಲಕಾಲ ಸಹಜೀವನ ನಡೆಸುತ್ತಿದ್ದರು. ಮದುವೆಯ ನಂತರ ಕೋಲ್ಕತಾದಲ್ಲಿ ಔತಣಕೂಟ ಏರ್ಪಡಿಸಿದ್ದರು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ನುಸ್ರತ್ ವೈಯಕ್ತಿಕ ಜೀವನದ ಬಗ್ಗೆ ನಮಗೆ ಬೇಕಿಲ್ಲ. ಅವರು ಯಾರನ್ನು ಮದುವೆಯಾಗಿದ್ದಾರೆ, ಯಾರ ಜೊತೆಗೆ ಇದ್ದಾರೆ ಎಂಬುದು ಬೇಕಿಲ್ಲ. ಆದರೆ ಜನರಿಂದ ಆಯ್ಕೆಯಾಗಿ ಸಂಸತ್‌ ಪ್ರವೇಶಿಸಿರುವ ನುಸ್ರತ್‌ ಅವರ ಅಧಿಕೃತ ವಿವರಗಳಲ್ಲಿ ವಿವಾಹಿತರು ಎಂದು ನಮೂದಿಸಲಾಗಿದೆ. ಜನಪ್ರತಿನಿಧಿಯಾಗಿದ್ದುಕೊಂಡು ಸುಳ್ಳು ಹೇಳಬಾರದು ಎಂದು ಪಶ್ಚಿಮ ಬಂಗಾಳದ ಬಿಜೆಪಿ ಟಾಂಗ್‌ ನೀಡಿತ್ತು.

ಬಾರಸಾತ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ನುಸ್ರತ್‌ ಜಹಾನ್‌ ಬಿಜೆಪಿ ಅಭ್ಯರ್ಥಿಯನ್ನು 3.5 ಲಕ್ಷ ಮತಗಳ ಅಂತರದಿಂದ ಸೋಲಿಸಿ ಸಂಸತ್‌ ಪ್ರವೇಶಿಸಿದ್ದಾರೆ.

(ಬೇಬಿ ಬಂಪ್‌ ಎಂಬುದು ಗರ್ಭಿಣಿಯ ಉದರ ಎಂದಾಗಿದೆ.)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು