ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶದಲ್ಲಿ ಕ್ರೂಸ್‌ ಮುಂದಿನ ಸಿನಿಮಾ: ವರದಿ

Last Updated 10 ಅಕ್ಟೋಬರ್ 2022, 9:16 IST
ಅಕ್ಷರ ಗಾತ್ರ

ಭೂಮಿಯ ಮೇಲಿನ ಬಹುತೇಕ ಸ್ಟಂಟ್‌ಗಳನ್ನು ಮುಗಿಸಿರುವ ಹಾಲಿವುಡ್‌ ತಾರೆ ಟಾಮ್‌ ಕ್ರೂಸ್‌, ಇದೀಗ ತಮ್ಮ ಮುಂದಿನ ಚಿತ್ರವನ್ನು ಬಾಹ್ಯಾಕಾಶದಲ್ಲಿ ಚಿತ್ರಿಸಲು ಮುಂದಾಗಿದ್ದಾರಂತೆ.

ಡೌಗ್‌ ಲಿಮನ್‌ ಜೊತೆ ಮುಂದಿನ ಸಿನಿಮಾ ತಯಾರಿ ನಡೆಸಿರುವ ಕ್ರೂಸ್‌, ಭೂಮಿಯಿಂದಾಚೆಗೆ ಸಿನಿಮಾ ಮಾಡುವ ಇರಾದೆ ಹೊಂದಿದ್ದಾರೆ ಎಂದು ನ್ಯೂಯಾರ್ಕ್‌ ಪೋಸ್ಟ್‌ ವರದಿ ಮಾಡಿದೆ. 2020ರಲ್ಲಿಯೇ ಕ್ರೂಸ್‌ಗೆ ಈ ಆಲೋಚನೆ ಬಂದಿದ್ದು, ಕೋವಿಡ್‌ನಿಂದಾಗಿ ಯೋಜನೆ ಮುಂದಕ್ಕೆ ಹೋಗಿದೆ. ಯೂನಿವರ್ಸಲ್‌ ಫಿಲಂಸ್‌ ನಿರ್ಮಾಣದಲ್ಲಿ ಚಿತ್ರ ಸಿದ್ಧಗೊಳ್ಳಲಿದೆ ಎನ್ನಲಾಗಿದೆ.

ಹೆಚ್ಚಿನ ಸಿನಿಮಾಗಳನ್ನು ಭೂಮಿಯಲ್ಲಿಯೇ ಚಿತ್ರಿಸಿ ಪಾತ್ರವನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ ಎಂದು ಯೂನಿವರ್ಸಲ್‌ ಫಿಲಂಸ್‌ ಅಧ್ಯಕ್ಷೆ ಡೊನ್ನ ಲ್ಯಾಂಗ್ಲಿ ಹೇಳಿದ್ದಾರೆ ಎಂದು ನ್ಯೂಯಾರ್ಕ್‌ ಪೋಸ್ಟ್‌ ವರದಿ ತಿಳಿಸಿದೆ.

ಸದ್ಯ ಮಾತುಕತೆ ಹಂತದಲ್ಲಿರುವ ಸಿನಿಮಾ ಪ್ರಾರಂಭಗೊಂಡರೆ, ಕ್ರೂಸ್‌ ಅಂತರಿಕ್ಷದಲ್ಲಿ ಚಿತ್ರೀಕರಣ ನಡೆಸಿದ ಮೊದಲ ತಾರೆ ಎನಿಸಿಕೊಳ್ಳಲಿದ್ದಾರೆ. ಕ್ರೂಸ್‌ 2022ರಲ್ಲಿ ಬಾಹ್ಯಾಕಾಶದ ಕುರಿತು ಸಾಕ್ಷ್ಯಚಿತ್ರ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT