ಭಾನುವಾರ, ಮಾರ್ಚ್ 7, 2021
30 °C
NTR Films

ಆರ್‌ಆರ್‌ಆರ್‌ ನಂತರ ಜೂನಿಯರ್‌ ಎನ್‌ಟಿಆರ್‌ ಕೈಯಲ್ಲಿವೆ ಸಾಲು ಸಾಲು ಸಿನಿಮಾಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೂನಿಯರ್‌ ಎನ್‌ಟಿಆರ್‌ ಸಿನಿಮಾಗಳು ತೆರೆ ಕಾಣದೆ ಮೂರು ವರ್ಷಗಳು ಕಳೆದಿವೆ. 2018ರಲ್ಲಿ ಬಿಡುಗಡೆಯಾದ ‘ಅರವಿಂದ ಸಮೇತ’ ನಂತರ ಎನ್‌ಟಿಆರ್‌ ಯಾವುದೇ ಸಿನಿಮಾ ಮಾಡಿರಲಿಲ್ಲ. ಸದ್ಯ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಸಿನಿಮಾದಲ್ಲಿ ಬ್ಯುಸಿಯಾಗಿರುವ ಎನ್‌ಟಿಆರ್‌ ನಂತರದ ಯೋಜನೆಗಳೇನು? ಎಂಬ ಬಗ್ಗೆ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದರು. ಆದರೆ ಆರ್‌ಆರ್‌ಆರ್ ನಂತರ ಸ್ಟಾರ್ ನಿರ್ದೇಶಕರ ಸಿನಿಮಾಗಳಲ್ಲಿ ಎನ್‌ಟಿಆರ್‌ ನಟಿಸುತ್ತಿದ್ದಾರೆ. ಈ ಸುದ್ದಿ ಎನ್‌ಟಿಆರ್ ಅಭಿಮಾನಿಗಳಿಗೆ ಸಂತಸ ತಂದಿರುವುದು ಸುಳ್ಳಲ್ಲ.

ಸ್ಟಾರ್‌ ನಿರ್ದೇಶಕರ ದೊಡ್ಡ ಬಜೆಟ್‌ನ ಸಿನಿಮಾಗಳಲ್ಲಿ ಎನ್‌ಟಿಆರ್ ನಟಿಸುತ್ತಿರುವ ಬಗ್ಗೆ ಅಭಿಮಾನಿಗಳಲ್ಲಿ ಕಾತರ ಹೆಚ್ಚಿದೆ. ಇವರು ಬರಹಗಾರ, ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರ 30ನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಜೊತೆ ಸಿನಿಮಾಕ್ಕಾಗಿ ಮಾತುಕತೆ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಸಲಾರ್ ಶೂಟಿಂಗ್ ಪೂರ್ಣಗೊಳಿಸಿದ ಬಳಿಕ ಪ್ರಶಾಂತ್ ಎನ್‌ಟಿಆರ್ ಜೊತೆಗಿನ ಸಿನಿಮಾಕ್ಕೆ ಕೆಲಸ ಮಾಡುವ ಸಾಧ್ಯತೆ ಇದೆ. ಅಷ್ಟರಲ್ಲಿ ಎನ್‌ಟಿಆರ್ ಕೂಡ ತಿವಿಕ್ರಮ್ ಚಿತ್ರ ಪೂರ್ಣಗೊಳಿಸಬೇಕಿದೆ.

ಸದ್ಯದ ಸುದ್ದಿಯ ಪ್ರಕಾರ ಟಾಲಿವುಡ್‌ನ ಯಶಸ್ವಿ ನಿರ್ದೇಶಕ ಕೊರಟಾಲ ಶಿವ ಜೊತೆಗೂ ಎನ್‌ಟಿಆರ್ ಸಿನಿಮಾ ಮಾಡಲಿದ್ದಾರಂತೆ. ಇದಲ್ಲದೇ ಕಲ್ಯಾಣ್‌ ರಾಮ್ ಪ್ರೊಡಕ್ಷನ್ ಸಿನಿಮಾದಲ್ಲೂ ಎನ್‌ಟಿಆರ್ ನಟಿಸಲಿದ್ದು ಆ ಸಿನಿಮಾಕ್ಕೆ ನಿರ್ದೇಶನಕ್ಕೆ ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ. 2024ರವರೆಗೆ ಎನ್‌ಟಿಆರ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವ ಮೊದಲು ಈ ಎಲ್ಲಾ ಸಿನಿಮಾಗಳನ್ನು ಮುಗಿಸಬೇಕಿದೆ. ಈ ನಡುವೆ ಎನ್‌ಟಿಆರ್ ರಾಜಕೀಯಕ್ಕೆ ಪ್ರವೇಶಿಸುವ ಸಾಧ್ಯತೆಯೂ ಇದೆ ಎಂಬ ಗಾಳಿಸುದ್ದಿಯೂ ಕೇಳಿಬರುತ್ತಿದ್ದು ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು