ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Song | ಕೆಜಿಎಫ್ ಚಾಪ್ಟರ್ 2: ಮಾ.21ರಂದು ’ತೂಫಾನ್‌’ ಆಗಿ ಬರಲಿದ್ದಾರೆ ಯಶ್‌

Last Updated 20 ಮಾರ್ಚ್ 2022, 14:11 IST
ಅಕ್ಷರ ಗಾತ್ರ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾದ ’ತೂಫಾನ್‌’ ಲಿರೀಕಲ್‌ ಸಾಂಗ್‌ ಸೋಮವಾರ (ಮಾ.21) ಬಿಡುಗಡೆಯಾಗಲಿದೆ.

ಸುಮಾರು ದಿನಗಳ ನಂತರ ಸಿನಿಮಾಗೆ ಸಂಬಂಧಿಸಿದಂತೆ ಅಪ್ಡೇಟ್ ಒಂದನ್ನು ಚಿತ್ರತಂಡ ಹಂಚಿಕೊಂಡಿದೆ. ಈ ಮೂಲಕ ಯಶ್‌ ಅಭಿಮಾನಿಗಳಿಗೆ ಖುಷಿಯನ್ನು ಹೊತ್ತುತಂದಿದೆ.

ಸೋಮವಾರ 11 ಗಂಟೆಗೆ ಸಿನಿಮಾದ ’ತೂಫಾನ್‌’ ಹಾಡು ಬಿಡುಗಡೆಯಾಗಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಚಿತ್ರ ಏಪ್ರಿಲ್ 14 ಕ್ಕೆ ಬಿಡುಗಡೆಯಾಗಲಿದ್ದು ಇದಕ್ಕಾಗಿ ಎಲ್ಲ ತಯಾರಿ ಮಾಡಕೊಳ್ಳಲಾಗುತ್ತಿದೆ ಎಂದು ಚಿತ್ರತಂಡ ಹೇಳಿದೆ.

ಚಿತ್ರದಲ್ಲಿ ಸಂಜಯ್‌ ದತ್‌, ರವೀನಾ ಟಂಡನ್‌ ಸೇರಿದಂತೆ ಹಲವು ಪ್ರಮುಖ ನಟರು ಇದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ

ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ ಅಡಿಯಲ್ಲಿ ವಿಜಯ್‌ ಕಿರಗಂದೂರು ಚಿತ್ರ ನಿರ್ಮಿಸುತ್ತಿದ್ದಾರೆ. ಈ ವರ್ಷ ಜನವರಿ 7ರಂದು ಚಿತ್ರದ ಯೂನಿವರ್ಸಲ್‌ ಟೀಸರ್‌ ಬಿಡುಗಡೆ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT