ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ತುಕ್ರ-ತನಿಯ’ನಿಗೆ ವಿಜಯ್ ಸಾಥ್‌

Published 28 ಆಗಸ್ಟ್ 2023, 1:28 IST
Last Updated 28 ಆಗಸ್ಟ್ 2023, 1:28 IST
ಅಕ್ಷರ ಗಾತ್ರ

ನಟ ಪ್ರವೀಣ್ ತೇಜ್ ಹಾಗೂ ಅಚ್ಯುತ್ ಕುಮಾರ್ ನಟಿಸಿರುತ್ತಿರುವ ನೂತನ ಚಿತ್ರದ ಶೀರ್ಷಿಕೆಯನ್ನು ಇತ್ತೀಚೆಗಷ್ಟೇ ದುನಿಯಾ ವಿಜಯ್‌ ಬಿಡುಗಡೆಗೊಳಿಸಿದರು. ‘ಚೂರಿಕಟ್ಟೆ’ ಸಿನಿಮಾ ನಿರ್ದೇಶಿಸಿದ್ದ ರಾಘು ಶೀವಮೊಗ್ಗ ಆ್ಯಕ್ಷನ್‌–ಕಟ್‌ ಹೇಳುತ್ತಿರುವ ಚಿತ್ರಕ್ಕೆ ‘ತುಕ್ರ-ತನಿಯ’ ಎಂದು ಹೆಸರಿಡಲಾಗಿದೆ.

‘ತುಕ್ರ’ ಎಂದರೆ ಶುಕ್ರವಾರ ಹುಟ್ಟಿದವನು. ‘ತನಿಯ’ ಅಂದರೆ ಶನಿವಾರ ಹುಟ್ಟಿದವನು. ಶುಕ್ರವಾರ-ಶನಿವಾರ ಹುಟ್ಟಿದ ಇಬ್ಬರ ನಡುವಿನ ಕಥಾಹಂದರ ಇದಾಗಿದೆ. ಮಲೆನಾಡಿನ ಗ್ರಾಮೀಣ ಭಾಗದ ಕಥೆಯಾಗಿದ್ದು, ಡಿಸೆಂಬರ್‌ನಿಂದ ಚಿತ್ರೀಕರಣ ಪ್ರಾರಂಭ’ ಎಂದರು ರಾಘು ಶೀವಮೊಗ್ಗ.

ಈ ಚಿತ್ರವನ್ನು ಪದ್ಮಾ ಪಿಕ್ಚರ್ಸ್ ಹಾಗೂ ಗೌರಿ ಟಾಕೀಸ್‌ನಡಿ ನಿರ್ಮಾಣ ಮಾಡಲಾಗುತ್ತಿದ್ದು, ಶಾಂತಿ ಸಾಗರ್ ಛಾಯಾಗ್ರಹಣ, ಕದ್ರಿ ಮಣಿಕಾಂತ್ ಸಂಗೀತ, ಪ್ರಕಾಶ್ ಕಾರಿಂಜ ಸಂಕಲನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT