ಮುಂಬೈ: ಹಿಂದಿಯ ಕಿರುತೆರೆ ನಟ ಸಮೀರ್ ಶರ್ಮಾ (44) ಅವರು ಇಲ್ಲಿನ ಉಪನಗರದಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉಪನಗರದ ಪಶ್ಚಿಮ ಮಲಾಡ್ ಬಡಾವಣೆಯ ಚಿಂಚೋಲಿ ಬಂಡರ್ ಪ್ರದೇಶದ ನೇಹಾ ಕಟ್ಟಡದ ಫ್ಲಾಟ್‌ನಲ್ಲಿ ಸಮೀರ್ ವಾಸವಿದ್ದರು. ಮನೆಯ ಅಡುಗೆ ಕೋಣೆಯಲ್ಲಿ ಸಮೀರ್ ಶರ್ಮಾ ಅವರ ದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಎರಡು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ’ ಎಂದು ಮಲಾಡ್ ಪೊಲೀಸ್ ಠಾಣೆಯ ಅಧಿಕಾರಿ ಜಾರ್ಜ್ ಫೆರ್ನಾಡಿಸ್ ಅವರು ತಿಳಿಸಿದ್ದಾರೆ.

ಸಮೀರ್ ಶರ್ಮಾ ಹಿಂದಿ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಾದ ’ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ’, ’ಕಹಾನಿ ಘರ್ ಘರ್ ಕಿ’ ಮತ್ತು ’ಯೇಹ್ ರಿಶ್ತೆ ಹೇನ್ ಪ್ಯಾರ್ ಕೆ’ ದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.