ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೈಮ್‌ ಮೂಲಕ ಎರಡು ಕನ್ನಡ ಸಿನಿಮಾ

Last Updated 15 ಮೇ 2020, 11:34 IST
ಅಕ್ಷರ ಗಾತ್ರ

ಲಾಕ್‌ಡೌನ್‌ ತೆರವಾಗುತ್ತಿಲ್ಲ, ಸಿನಿಮಾ ಮಂದಿರಗಳ ಬಾಗಿಲು ತೆರೆಯುತ್ತಿಲ್ಲ... ಹೀಗಿದ್ದರೂ, ಹೊಸ ಸಿನಿಮಾ ವೀಕ್ಷಿಸುವುದು ಯಾವಾಗ ಎಂಬ ವ್ಯಥೆ ಬೇಡ. ಪಿಆರ್‌ಕೆ ಪ್ರೊಡಕ್ಷನ್ಸ್‌ ನಿರ್ಮಾಣದ ‘ಫ್ರೆಂಚ್ ಬಿರಿಯಾನಿ’ ಹಾಗೂ ‘ಲಾ’ ಸಿನಿಮಾಗಳು ಅಮೆಜಾನ್‌ ಪ್ರೈಮ್‌ ಮೂಲಕ ಬಿಡುಗಡೆಗೆ ಸಿದ್ಧವಾಗಿವೆ.

ಲಾ (ಕಾನೂನು) ಚಿತ್ರವು ಜೂನ್ 26ರಂದು ಪ್ರೈಮ್ ಮೂಲಕ ಬಿಡುಗಡೆ ಆಗಲಿದೆ. ರಾಗಿಣಿ ಚಂದ್ರನ್, ಸಿರಿ ಪ್ರಹ್ಲಾದ್ ಮತ್ತು ‘ಮುಖ್ಯಮಂತ್ರಿ’ ಚಂದ್ರು ಇದರ ತಾರಾಗಣದಲ್ಲಿ ಇದ್ದಾರೆ. ಚಿತ್ರದ ಕಥೆಯನ್ನು ರಘು ಸಮರ್ಥ್ ಬರೆದು ಅವರೇ ನಿರ್ದೇಶಿಸಿದ್ದಾರೆ. ಅಶ್ವಿನಿ ಮತ್ತು ಪುನೀತ್ ರಾಜ್‍ಕುಮಾರ್ ಅವರು ಇದರ ನಿರ್ಮಾಪಕರು.

ಕನ್ನಡದಲ್ಲಿ ಈ ಹಿಂದೆ ‘ಭಿನ್ನ’ ಸಿನಿಮಾ ಒಟಿಟಿ ವೇದಿಕೆಯ ಮೂಲಕವೇ ತೆರೆಗೆ ಬಂದಿತ್ತು. ಇದನ್ನು ಆದರ್ಶ್‌ ಈಶ್ವರಪ್ಪ ನಿರ್ದೇಶಿಸಿದ್ದರು. ಇದು ಯಾವುದೇ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಂಡಿರಲಿಲ್ಲ. ಇದನ್ನು ಜೀ5 ವೇದಿಕೆಯು ತೆರೆಗೆ ತಂದಿತ್ತು. ಈಗ ಈ ಎರಡು ಚಿತ್ರಗಳು ಕನ್ನಡದಲ್ಲಿ ನೇರವಾಗಿ ಒಟಿಟಿ ಮೂಲಕ ತೆರೆಗೆ ಬರುತ್ತಿವೆ.

‘ಫ್ರೆಂಚ್ ಬಿರಿಯಾನಿ’ ಚಿತ್ರವು ಜುಲೈ 24ರಂದು ಬಿಡುಗಡೆ ಆಗಲಿದೆ. ಡ್ಯಾನಿಶ್ ಸೇಟ್, ಸಾಲ್ ಯೂಸುಫ್ ಹಾಗು ಪಿತೋಬಶ್ ಈ ಚಿತ್ರದ ತಾರಾಗಣದಲ್ಲಿ ಇದ್ದಾರೆ. ಅವಿನಾಶ್ ಬಳೇಕ್ಕಳ ಚಿತ್ರಕಥೆಯನ್ನು ಬರೆದಿದ್ದಾರೆ. ಪನ್ನಗ ಭರಣ ಇದನ್ನು ನಿರ್ದೇಶಿಸಿದ್ದಾರೆ. ಇದನ್ನೂ ಅಶ್ವಿನಿ ಮತ್ತು ಪುನೀತ್ ರಾಜ್‍ಕುಮಾರ್ ನಿರ್ಮಾಣ ಮಾಡಿದ್ದಾರೆ.

ಅಮಿತಾಭ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನಾ ನಟನೆಯ ‘ಗುಲಾಬೊ ಸಿತಾಬೊ’ ಕೂಡ ಪ್ರೈಮ್‌ ಮೂಲಕವೇ ಬಿಡುಗಡೆ ಆಗುತ್ತಿದೆ. ಹಾಗೆಯೇ, ವಿದ್ಯಾ ಬಾಲನ್ ನಟನೆಯ ‘ಶಕುಂತಲಾ ದೇವಿ’ ಕೂಡ ಪ್ರೈಮ್‌ ಮೂಲಕ ಮನೆಯಂಗಳ ತಲುಪಲಿದೆ.

ತಮಿಳಿನ ‘ಪೊನ್‌ಮಗಲ್ ವಂದಲ್’ ಹಾಗೂ ತಮಿಳು–ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬರಲಿರುವ ‘ಪೆಂಗ್ವಿನ್’ ಕೂಡ ಪ್ರೈಮ್ ಮೂಲಕವೇ ತೆರೆಗೆ ಬರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT