ರಾಮ್ ಗೋಪಾಲ್ ವರ್ಮಾ ಅವರ ಗ್ಯಾಂಗ್‌ಸ್ಟರ್ ಕಥೆ ‘R’ನಲ್ಲಿ ಉಪೇಂದ್ರ

ನಟ ಉಪೇಂದ್ರ ಅವರಿಗೆ ಆ್ಯಕ್ಷನ್ ಕಟ್ ಹೇಳಲಿದ್ದೇನೆ ಎಂದು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ(ಆರ್‌ಜಿವಿ) ಕೆಲ ತಿಂಗಳ ಹಿಂದೆ ಉಪೇಂದ್ರ ಅವರ ಜನ್ಮದಿನದಂದೇ ಟ್ವೀಟ್ ಮೂಲಕ ತಿಳಿಸಿದ್ದರು. ಇದೀಗ ಈ ಚಿತ್ರದ ಶೀರ್ಷಿಕೆಯನ್ನು ಆರ್‌ಜಿವಿ ಘೋಷಿಸಿದ್ದಾರೆ.
‘ಇದು ಭಾರತದ ಅಪರಾಧ ಜಗತ್ತಿನ ಇತಿಹಾಸದಲ್ಲೇ ಭಿನ್ನ ಗ್ಯಾಂಗ್‌ಸ್ಟರ್ ಓರ್ವನ ಕಥೆ’ ಎಂದಿರುವ ಆರ್‌ಜಿವಿ, ಇದಕ್ಕೆ ‘R’ ಎಂದು ಶೀರ್ಷಿಕೆ ಇಟ್ಟಿದ್ದಾರೆ. ಎ ಸ್ಕ್ವ್ಯಾರ್ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಸದ್ಯಕ್ಕೆ ಶೀರ್ಷಿಕೆ ಅನಾವರಣದ ವಿಡಿಯೊವನ್ನಷ್ಟೇ ಆರ್‌ಜಿವಿ ಅವರು ಟ್ವೀಟ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಡ್ಯಾಗರ್‌ಗೆ ಉಪೇಂದ್ರ ಮುತ್ತಿಡುತ್ತಿರುವ ತುಣುಕು ಇದರಲ್ಲಿದೆ. ಚಿತ್ರ ಯಾವೆಲ್ಲ ಭಾಷೆಗಳಲ್ಲಿ ಬರಲಿದೆ ಹಾಗೂ ತಾರಾಗಣದ ಬಗ್ಗೆ ಆರ್‌ಜಿವಿ ಅವರು ಹೆಚ್ಚಿನ ಮಾಹಿತಿ ನೀಡಿಲ್ಲ.
ಸದ್ಯಕ್ಕೆ, ಏ.1ರಂದು ತೆರೆಕಾಣಲಿರುವ ‘ಹೋಮ್ ಮಿನಿಸ್ಟರ್’ ಸಿನಿಮಾ ಪ್ರಚಾರದ ಜೊತೆಗೆ ಆರ್.ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ದ ಚಿತ್ರೀಕರಣದಲ್ಲಿ ಉಪೇಂದ್ರ ತೊಡಗಿಸಿಕೊಂಡಿದ್ದಾರೆ.
Happy to announce my film with @nimmaupendra titled R based on an incredibly unique gangster in the criminal history of india ..It’s produced by A Square productions pic.twitter.com/QbdJFKdQRk
— Ram Gopal Varma (@RGVzoomin) March 24, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.