ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರ್ವಶಿ ರೌಟೇಲಾ, ಕ್ರಿಕೆಟಿಗ ರಿಷಭ್ ಪಂತ್ ಡೇಟಿಂಗ್‌: ಮೌನ ಮುರಿದ ನಟಿ

Last Updated 21 ಮಾರ್ಚ್ 2022, 6:21 IST
ಅಕ್ಷರ ಗಾತ್ರ

ಬಾಲಿವುಡ್‌ ನಟಿಊರ್ವಶಿ ರೌಟೇಲಾ ಹಾಗೂ ಕ್ರಿಕೆಟಿಗರಿಷಭ್ ಪಂತ್ ನಡುವಿನ ಡೇಟಿಂಗ್‌ ಬಗ್ಗೆ ಮೌನ ಮುರಿದಿರುವ ನಟಿ, ನಮ್ಮ ನಡುವೆ ಅಂತಹ ಯಾವುದೇ ಸಂಬಂಧಗಳು ಇರಲಿಲ್ಲ ಎಂದು ಖಾಸಗಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ನಾನು ರಿಷಭ್‌ ಪಂತ್‌ ಜೊತೆ ಡೇಟಿಂಗ್ ಮಾಡಿಲ್ಲ, ಕಾರ್ಯಕ್ರಮಗಳಲ್ಲಿ ಎರಡು ಮೂರು ಸಲ ಒಟ್ಟಾಗಿ ಕಾಣಿಸಿಕೊಂಡಿದ್ದೆ, ಅಷ್ಟೇ. ಸಾಮಾಜಿಕ ಮಾಧ್ಯಮಗಳು ಹಾಗೂ ಸುದ್ದಿವಾಹಿನಿಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಸುಳ್ಳು ಎಂದು ಅವರು ಹೇಳಿದ್ದಾರೆ. ಹಾಗೇ ನಾನು ಪಂತ್‌ ಅವರಿಗೆ 17 ಗಂಟೆ ಕಾಯಿಸಿಲ್ಲ ಎಂದುಪಿಂಕ್‌ವಿಲ್ಲಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

2017ರಿಂದಲೂ ಪಂತ್‌ ಮತ್ತು ಊರ್ವಶಿ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಹಲವು ಸಲ ಅವರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು.

2013ರಲ್ಲಿ ‘ಸಿಂಗ್ ಸಾಬ್ ದಿ ಗ್ರೇಟ್’ ಚಿತ್ರದ ಮೂಲಕ ಊರ್ವಶಿ ಸಿನಿಮಾರಂಗ ಪ್ರವೇಶ ಮಾಡಿದರು. ಅವರು ಕನ್ನಡದ ‘ಮಿಸ್ಟರ್ ಐರಾವತ’ ಸಿನಿಮಾದಲ್ಲೂ ನಟಿಸಿದ್ದಾರೆ.

ಸದ್ಯ ಊವರ್ಶಿ ಅವರು ‘ಇನ್ಸ್‌ಪೆಕ್ಟರ್‌ ಕವಿನಾಶ್’ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ರಣದೀಪ್‌ ಹೂಡ ಇದರಲ್ಲಿ ನಾಯಕ ನಟರಾಗಿ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT