ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮಿಷಕ್ಕೆ ₹ 1 ಕೋಟಿ ಚಾರ್ಜ್ ಮಾಡುವೆ ಎಂದ ನಟಿ ಊರ್ವಶಿ: ಸಿಕ್ಕಾಪಟ್ಟೆ ಟ್ರೋಲ್

Published 30 ಆಗಸ್ಟ್ 2023, 14:46 IST
Last Updated 30 ಆಗಸ್ಟ್ 2023, 14:46 IST
ಅಕ್ಷರ ಗಾತ್ರ

ನಟಿ ಊರ್ವಶಿ ರೌಟೇಲಾ ಅವರು ಅಭಿನಯಿಸಿದ್ದು ಕೆಲವೇ ಚಿತ್ರಗಳಾದರೂ ಗಾಸಿಪ್‌ಗಳಿಂದ ಆಗಾಗ ಸುದ್ದಿಯಾಗುತ್ತಾರೆ.

ಇತ್ತೀಚೆಗೆ ಅವರು ಮಾಧ್ಯಮದವರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರ ನೀಡಿರುವುದು ಟ್ರೋಲ್‌ ಆಗಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಊರ್ವಶಿ ಅವರನ್ನು ‘ನೀವು ನಿಮಿಷಕ್ಕೆ ಒಂದು ಕೋಟಿ ರೂಪಾಯಿ ಚಾರ್ಜ್ ಮಾಡುತ್ತಿರಂತೆ, ಹೌದಾ? ಎಂದು ವರದಿಗಾರರು ಕೇಳಿದ್ಧಾರೆ.

ಇದಕ್ಕೆ ನಗುತ್ತಾ ಉತ್ತರಿಸಿದ ನಟಿ, ಹೌದು ಎಂದಿದ್ದಾರೆ. ಮುಂದುವರಿದು, ನಿಮಿಷಕ್ಕೆ ಒಂದು ಕೋಟಿ ರೂಪಾಯಿ ಚಾರ್ಜ್ ಮಾಡುತ್ತೇನೆ ಎನ್ನುವುದು ಹೆಮ್ಮೆಯ ವಿಷಯ. ಸ್ವಸಾಮರ್ಥ್ಯದಿಂದ ಮೇಲೆ ಬಂದ ನನ್ನಂತಹ ಎಲ್ಲ ನಟಿಯರಿಗೂ ಆ ಅವಕಾಶ ಇದೆ ಎಂದು ಹೇಳಿಕೊಂಡಿದ್ದಾರೆ.

ಆದರೆ, ನೆಟ್ಟಿಗರು ಊರ್ವಶಿ ಅವರ ಕಾಲೆಳೆದಿದ್ದಾರೆ.

'ತಮಾಷೆ ಮಾಡಲು ಒಂದು ಇತಿಮಿತಿ ಇರಬೇಕು' ಎಂದು ಒಬ್ಬರು ಕಿವಿಮಾತು ಹೇಳಿದ್ದಾರೆ. ಮತ್ತೊಬ್ಬರು, 'ಊರ್ವಶಿಗೆ ಇಷ್ಟು ಮೊತ್ತ ನೀಡುತ್ತಿರುವುದು ಯಾರು? ಅಷ್ಟಕ್ಕೂ ಆಕೆಯನ್ನು ಯಾರು ನೋಡುತ್ತಾರೆ?' ಎಂದು ಕೇಳಿದ್ದಾರೆ.

'ಆಲಿಯಾ ಭಟ್ ನಂತರ ಇದೀಗ ಊರ್ವಶಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆ ಮೂಲಕ ವೈರಲ್ ಆಗಲು ನೋಡುತ್ತಿದ್ದಾರೆ' ಎಂದು ಕೆಲವರು ಕಿಚಾಯಿಸಿದ್ದಾರೆ.

ಜನಪ್ರಿಯ ಗೀತೆ 'ಊರ್ವಶಿ.. ಊರ್ವಶಿ.. ಟೇಕ್ ಇಟ್ ಈಸಿ ಊರ್ವಶಿ' ಸಾಲುಗಳನ್ನು ಬರೆದು ಕಾಲೆಳೆದಿದ್ದಾರೆ.

ಮಾಡೆಲಿಂಗ್ ಹಾಗೂ ಅಲ್ಬಮ್ ವಿಡಿಯೊಗಳಲ್ಲಿ ತೊಡಗಿಸಿಕೊಂಡಿರುವ ಊರ್ವಶಿ ಅವರು ಸದ್ಯ ‘ಸ್ಕಂದ’, ‘ದಿಲ್ ಹೈ ಗ್ರೇ’ ಎಂಬ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಕನ್ನಡದಲ್ಲಿ ದರ್ಶನ್ ಅಭಿನಯದ 'ಐರಾವತ' ಸಿನಿಮಾದಲ್ಲಿ ಅಭಿನಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT