ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ವಿಮಾನದಲ್ಲಿ ಪ್ರಯಾಣ ಮಾಡಿದ ನಟ ದಳಪತಿ ವಿಜಯ್‌, ನಟಿ ವರಲಕ್ಷ್ಮಿ

Last Updated 1 ಸೆಪ್ಟೆಂಬರ್ 2022, 11:27 IST
ಅಕ್ಷರ ಗಾತ್ರ

ತಮಿಳು ನಟ ದಳಪತಿ ವಿಜಯ್‌ ಹಾಗೂ ನಟಿ ವರಲಕ್ಷ್ಮಿ ಶರತ್‌ಕುಮಾರ್‌ ಅವರು ಒಂದೇ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದು, ವಿಮಾನದಲ್ಲಿ ವಿಜಯ್‌ ಜೊತೆಗಿನ ಸೆಲ್ಫಿ ಫೋಟೊಗಳನ್ನು ಅವರುಹಂಚಿಕೊಂಡಿದ್ದಾರೆ.

ಹೌದು, ಚೆನ್ನೈನಿಂದ ಹೈದರಾಬಾದ್‌ಗೆ ಇಬ್ಬರು ಒಟ್ಟಿಗೆ ಪ್ರಯಾಣ ಮಾಡಿದ್ದಾರೆ. ಇವರ ಜೊತೆ ನಿರ್ಮಾಪಕ ಜಗದೀಶ್‌ಕೂಡ ಇದ್ದರು.

ಎ.ಆರ್‌. ಮುರುಗದಾಸ್‌ ನಿರ್ದೇಶನ ಮಾಡಿದ್ದ‘ಸರ್ಕಾರ್‌‘ ಸಿನಿಮಾದಲ್ಲಿ ವಿಜಯ್‌, ವರಲಕ್ಷಿ ನಟಿಸಿದ್ದರು. ಅವರು ನೂತನಸಿನಿಮಾದ ಕೆಲಸಗಳಿಗಾಗಿ ಹೈದರಾಬಾದ್‌ಗೆ ತೆರಳುತ್ತಿದ್ದರು.ಅದೇ ವಿಮಾನದಲ್ಲಿ ನಟಿ ವರಲಕ್ಷ್ಮಿ ಕೂಡ ಹೈದರಾಬಾದ್‌ಗೆ ಪ್ರಯಾಣ ಬೆಳೆಸಿದ್ದರು.

ವಿಮಾನದಲ್ಲಿ ವಿಜಯ್‌ ಹಾಗೂ ನಿರ್ದೇಶಕ ಮುರುಗದಾಸ್‌ ಅವರನ್ನು ಗಮನಿಸಿದವರಲಕ್ಷ್ಮಿ ,ಅವರ ಬಳಿ ಹೋಗಿ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ. ನಂತರ ಅವರೊಂದಿಗೆ ಫೋಟೊಗಳನ್ನು ತೆಗೆಸಿಕೊಂಡಿದ್ದಾರೆ.

ಈ ಸೆಲ್ಪಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹಾಗೇ ವಿಜಯ್‌ ಸರ್‌ ಜೊತೆ ಕೆಲ ಕ್ಷಣ ಕಾಲ ಕಳೆದುಸಂಭ್ರಮಿಸಿದೆ ಎಂದು ವರಲಕ್ಷ್ಮಿ ಬರೆದುಕೊಂಡಿದ್ದಾರೆ.

ಈ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ವಿಜಯ್‌ ಅಭಿಮಾನಿಗಳು ಫೋಟೊಗಳನ್ನು ಮೆಚ್ಚಿಕೊಂಡಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT