ಭಾನುವಾರ, ಮಾರ್ಚ್ 7, 2021
29 °C

ರಿಮೇಕ್‌ ಚಿತ್ರದಲ್ಲಿ ವರುಣ್ ಧವನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ನಲ್ಲಿ ಈಗ ರಿಮೇಕ್‌ ಸರಣಿ ಆರಂಭವಾದಂತಿದೆ. ಗೋವಿಂದ್ ಹಾಗೂ ಕರೀಷ್ಮಾ ಕಪೂರ್‌ ನಟನೆಯಲ್ಲಿ ಬಿಗ್‌ ಹಿಟ್‌ ನೀಡಿದ್ದ
‘ಕೂಲಿ ನಂಬರ್‌ 1’ ಸಿನಿಮಾ ಈಗ ರೀಮೇಕ್‌ ಆಗುತ್ತಿದೆ.

ಹಳೆಯ ಸಿನಿಮಾವನ್ನು ಡೇವಿಡ್‌ ಧವನ್‌ ನಿರ್ದೇಶಿಸಿದ್ದರು. ಈಗ ರೀಮೇಕ್‌ನಲ್ಲಿ ಅವರ ಮಗ ವರುಣ್‌ ಧವನ್‌ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಕರೀಷ್ಮಾ ಪಾತ್ರವನ್ನು ಸಾರಾ ಅಲಿ ಖಾನ್‌ ಮಾಡುವ ಸಾಧ್ಯತೆ ಇದೆ ಎಂದು ‘ಬಿ’ ಟೌನ್‌ನಲ್ಲಿ ಗುಸು ಗುಸು ಆರಂಭವಾಗಿದೆ. ಕದೇರ್‌ ಖಾನ್‌ ಪಾತ್ರವನ್ನು ಪರೇಶ್‌ ರಾವಲ್‌ ಮಾಡಲಿರುವುದು ಕುತೂಹಲ ಹುಟ್ಟಿಸಿದೆ. ‌

ಆಗಸ್ಟ್‌ 5 ರಿಂದ ಶೂಟಿಂಗ್ ಆರಂಭವಾಗಲಿದೆ. ಪರೇಶ್‌ ರಾವಲ್‌ ಅವರೊಂದಿಗೆ ನಾಯಕ ಹಾಗೂ ನಾಯಕಿಯ ದೃಶ್ಯಗಳನ್ನು ಮೊದಲು ಬ್ಯಾಂಕಾಕ್‌ನಲ್ಲಿ ಚಿತ್ರೀಕರಿಸುವ ಬಗ್ಗೆ ಈಗಾಗಲೇ ಚರ್ಚೆ ನಡೆದಿದೆ. ಸಾರಾ ಅವರ ತಂದೆಯ ಪಾತ್ರವನ್ನು ಪರೇಶ್‌ ಮಾಡಲಿದ್ದಾರೆ. ಈ ಪಾತ್ರದಲ್ಲಿರುವ ಹಾಸ್ಯದ ಆಧಾರದ ಮೇಲೆ ಇಡೀ ಸಿನಿಮಾದ ಕತೆ ನಿಂತಿದೆ. ಹಳೆಯ ಸಿನಿಮಾದಲ್ಲಿ ಈ ಪಾತ್ರ ಹೆಚ್ಚು ಸಾಂಪ್ರದಾಯಿಕತೆ ಕಡೆಗೆ ಒಲವು ತೋರಿದ್ದರೂ ಹೊಸ ಸಿನಿಮಾದಲ್ಲಿ ಕೆಲವು ಮುಖ್ಯ ಬದಲಾವಣೆ ಮಾಡಲಾಗಿದೆ.

ಸಾರಾ, ವರುಣ್‌, ಪರೇಶ್‌ 20 ದಿನ ಬ್ಯಾಂಕಾಕ್‌ನಲ್ಲಿ ಶೂಟಿಂಗ್‌ನಲ್ಲಿ ತೊಡಗಲಿದ್ದಾರೆ. ಸಹ ಕಲಾವಿದರು ಕೂಡ ಒಂದೆರಡು ದಿನ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಸಿನಿಮಾ ತಂಡ ಇಲ್ಲಿಂದ ಸೀದಾ ಗೋವಾಕ್ಕೆ ತೆರಳಲಿದೆ.

ಮೂಲ ಕತೆಯಲ್ಲಿ ಕದೇರ್‌ ಖಾನ್‌ಗೆ ಇಬ್ಬರು ಮಕ್ಕಳು ಇರುತ್ತಾರೆ. ಶ್ರೀಮಂತ ಕುಟುಂಬಗಳಿಗೆ ಮಕ್ಕಳನ್ನು ಮದುವೆ ಮಾಡಿ ಕೊಡುವ ಉದ್ದೇಶ ಹೊಂದಿರುತ್ತಾರೆ. ನಾಯಕನನ್ನು ಭೇಟಿಯಾದ ಬಳಿಕ ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. ಕದೇರ್ ಖಾನ್‌ ಮಗಳ ಮೇಲೆ ಅತನಿಗೆ ಪ್ರೀತಿ ಉಂಟಾಗುತ್ತದೆ. ಆದರೆ ಹೊಸ ಸಿನಿಮಾದಲ್ಲಿ ಎರಡನೇ ನಾಯಕಿಯ ಪಾತ್ರಕ್ಕೆ ಇನ್ನೂ ಯಾರನ್ನೂ ಆಯ್ಕೆ ಮಾಡಿಲ್ಲವಂತೆ. ಒಂದೆಡೆ ದಿಶಾ ಪಟಾನಿ ಜೊತೆ ಚರ್ಚೆ ನಡೆಯುತ್ತಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

2020ರ ಮೇ 1ರಂದು ಸಿನಿಮಾ ಬಿಡುಗಡೆಯಾಗಲಿದೆ. ಈ ವಿಷಯವನ್ನು ಸ್ವತಃ ವರುಣ್‌ ಅವರೇ ಕೆಲವು ದಿನಗಳ ಹಿಂದೆ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು