ಬುಧವಾರ, ಏಪ್ರಿಲ್ 1, 2020
19 °C

ಹಿರಿಯ ನಟಿ ಕಿಶೋರಿ ಬಲ್ಲಾಳ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ ಕಿಶೋರಿ ಬಲ್ಲಾಳ್ ಅವರು ಮಂಗಳವಾರ ನಿಧನರಾಗಿದ್ದಾರೆ.

ಅವರಿಗೆ 82 ವರ್ಷ ವಯಸ್ಸಾಗಿತ್ತು. ಕಿಶೋರಿ ಬಲ್ಲಾಳ್‌ ಅವರಿಗೆ ಸೊಸೆ ಅಹಲ್ಯಾ ಬಲ್ಲಾಳ್ ಇದ್ದಾರೆ.

‘ಅವರಿಗೆ ವಯೋಸಹಜ ಆರೋಗ್ಯ ಸಮಸ್ಯೆಗಳು ಎದುರಾಗಿದ್ದವು. ಇತ್ತೀಚೆಗೆ ಅವರು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು ಎಂದು ಅವರ ಕುಟುಂಬದ ಆಪ್ತರು ತಿಳಿಸಿದ್ದಾರೆ.

1960ರಲ್ಲಿ ತೆರೆಗೆ ಬಂದ ‘ಇವಳೆಂಥ ಹೆಂಡತಿ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. 2004ರಲ್ಲಿ ತೆರೆಗೆ ಬಂದ, ಶಾರೂಖ್ ಖಾನ್ ಅಭಿನಯದ ‘ಸ್ವದೇಸ್’ ಚಿತ್ರದಲ್ಲಿ ಕಿಶೋರಿ ಅವರು ‘ಕಾವೇರಿ ಅಮ್ಮ’ನ ಪಾತ್ರದಲ್ಲಿ ಅಭಿನಯಿಸಿದ್ದರು.

ವೀರಬಾಹು, ಹನಿ ಹನಿ, ಸೂರ್ಯಕಾಂತಿ, ನಾನಿ, ನನ್ನುಸಿರೇ, ಕಹಿ, ಶಿವಗಾಮಿ, ಅಕ್ಕತಂಗಿ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

2012ರಲ್ಲಿ ಪ್ರಸಾರ ಆರಂಭಿಸಿದ ‘ಅಮೃತವರ್ಷಿಣಿ’ ಧಾರಾವಾಹಿಯಲ್ಲಿ ಕಿಶೋರಿ ಅವರ ಪಾತ್ರ ವೀಕ್ಷಕರ ಮನಗೆದ್ದಿತ್ತು. ಈ ಧಾರಾವಾಹಿ ಐದು ವರ್ಷಗಳ ಸಂಭ್ರಮವನ್ನೂ ಆಚರಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು