ಮಂಗಳವಾರ, ಮಾರ್ಚ್ 28, 2023
29 °C

ನಟನಾ ಪ್ರಯಾಣದ ಆರಂಭಿಕ ದಿನಗಳ ಆಡಿಷನ್ ಫೋಟೊ ಹಂಚಿಕೊಂಡ ನಟ ವಿಕ್ಕಿ ಕೌಶಲ್

ಪಿಟಿಐ Updated:

ಅಕ್ಷರ ಗಾತ್ರ : | |

ಬಾಲಿವುಡ್‌ನ ಭರವಸೆಯ ನಟರಲ್ಲೊಬ್ಬರಾಗಿರುವ ವಿಕ್ಕಿ ಕೌಶಲ್ ಅವರಿಂದು ನಟನಾ ಕ್ಷೇತ್ರಕ್ಕೆ ಕಾಲಿಟ್ಟು 9 ವರ್ಷ ಕಳೆದಿದೆ. ಇದೇ ಹಿನ್ನೆಲೆಯಲ್ಲೇ 9 ವರ್ಷಗಳ ಹಿಂದಿನ ಥ್ರೋಬ್ಯಾಕ್ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ 24ನೇ ವಯಸ್ಸಿನಲ್ಲಿ ಆಡಿಷನ್‌ಗೆ ಪಾಲ್ಗೊಳ್ಳುತ್ತಿದ್ದ ಸಮಯದ್ದಾಗಿದ್ದು, ಇಂದಿನ ವಿಕ್ಕಿ ಕೌಶಲ್‌ ಅವರೇನಾ ಫೋಟೊದಲ್ಲಿರುವವರು ಎನ್ನುವಷ್ಟರ ಮಟ್ಟಿಗೆ ಬದಲಾಗಿದ್ದಾರೆ.

ತಮ್ಮ ಮುಂದಿನ ಚಿತ್ರ 'ದಿ ಇಮ್ಮೊರ್ಟಲ್ ಅಶ್ವತ್ಥಾಮ'ದಲ್ಲಿ ತೊಡಗಿಕೊಂಡಿರುವ ವಿಕ್ಕಿ ಕೌಶಲ್, ನಟನಾ ಕ್ಷೇತ್ರದಲ್ಲಿ ತಮ್ಮ ಜರ್ನಿಯನ್ನು ಪ್ರಾರಂಭಿಸಿದ ಆರಂಭದ ದಿನಗಳನ್ನು ನೆನಸಿಕೊಂಡಿದ್ದಾರೆ. '9 ವರ್ಷದ ಹಿಂದಿನ ಇದೇ ದಿನ' ಎಂದು ಶೀರ್ಷಿಕೆ ನೀಡಿದ್ದಾರೆ.

2018ರಲ್ಲಿನ ಈ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ವಿಕ್ಕಿ, ತಮ್ಮ ಹೋರಾಟದ ದಿನಗಳನ್ನು ವಿವರಿಸಿದ್ದಾರೆ. 'ಒಂದಾನೊಂದು ಕಾಲದಲ್ಲಿ, 'ಸರ್ ನಾನು ಆಡಿಷನ್‌ಗೆ ಸರಿ ಹೊಂದುತ್ತೇನೆಯೇ?' ಎಂದು ಕೇಳುತ್ತಿದ್ದೆ. ನಿದ್ದೆಯಲ್ಲಿಯೂ ಕೂಡ ಇದನ್ನೇ ಕನವರಿಸುತ್ತಿದ್ದೆ. ನನ್ನ ಪ್ರಯಾಣದಲ್ಲಿ ದೇವರು ದಯೆ ತೋರಿಸಿದ್ದಾನೆ, ಅಲ್ಲದೆ, ನಾನು ಅಂದಿನಿಂದಲೂ ಒಂದು ಇಂಚು ಎತ್ತರಕ್ಕೆ ಬೆಳೆಸಿದ್ದೇನೆ. ನಿರ್ದಿಷ್ಟ ವಯಸ್ಸಿನ ನಂತರವೂ ಇದು ಸಾಧ್ಯವೇ ಎಂಬುದು ಗೊತ್ತಿಲ್ಲ' ಎಂದು ಬರೆದುಕೊಂಡಿದ್ದಾರೆ.

ಕಳೆದ ಒಂದೆರಡು ವರ್ಷಗಳಲ್ಲಿ ವಿಕಿ ಕೌಶಲ್ ಅವರು, ಮನ್‌ಮರ್ಜಿಯಾನ್ ಮತ್ತು ಉರಿ ಸೇರಿದಂತೆ ಅನೇಕ ಹಿಟ್‌ ಚಿತ್ರಗಳನ್ನು ನೀಡಿದ್ದಾರೆ. ಆದರೆ, ಸಿನಿಮಾ ಇಂಡಸ್ಟ್ರಿಯಲ್ಲಿ ಉಳಿದುಕೊಳ್ಳುವುದು ಅಷ್ಟೇನು ಸುಲಭವಾಗಿರಲಿಲ್ಲ.

2012 ರಲ್ಲಿ 'ಗ್ಯಾಂಗ್ಸ್‌ ಆಫ್‌ ವಾಸೇಪುರ' ಸಿನಿಮಾದಲ್ಲಿ ಕಶ್ಯಪ್‌ಗೆ ಸಹಾಯ ಮಾಡಿದ ನಂತರ, ಹಲವು ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಷ್ಟೇ ಕಾಣಿಸಿಕೊಂಡರು. ಬಳಿಕ 2015ರಲ್ಲಿ ತೆರೆಕಂಡ 'ಮಸಾನ್' ವಿಕ್ಕಿಯ ಅದೃಷ್ಟವನ್ನು ಬದಲಾಯಿಸಿತು. ಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ಶ್ಲಾಘನೆ ವ್ಯಕ್ತವಾಯಿತು ಮತ್ತು ಬಾಲಿವುಡ್‌ನಲ್ಲಿ ಬೇಡಿಕೆಯ ನಟನನ್ನಾಗಿ ಮಾಡಿತು.

ವಿಕ್ಕಿ ಕೌಶಲ್ ಅವರು ತಮ್ಮ ಮುಂದಿನ ಚಿತ್ರ 'ದಿ ಇಮ್ಮೊರ್ಟಲ್ ಅಶ್ವತ್ಥಾಮ' ಚಿತ್ರಕ್ಕೆ ತಯಾರಿ ಆರಂಭಿಸಿದ್ದಾರೆ. ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರದಲ್ಲಿ ವಿಕ್ಕಿ, ಅಶ್ವತ್ಥಾಮ ಅವರ ಪೌರಾಣಿಕ ಪಾತ್ರವನ್ನು ನಿರ್ವಹಿಸಲಿದ್ದಾರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು