ಶುಕ್ರವಾರ, ಮಾರ್ಚ್ 31, 2023
31 °C

ವಿಕ್ಟರಿ ವೆಂಕಟೇಶ್‌ ಅವರ 75ನೇ ಚಿತ್ರ ‘ಸೈಂಧವ್‌’: ನೋಟವೇ ಭಯಾನಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೈಂಧವನ ಮೊದಲ ನೋಟವೇ ಭಯಾನಕ. ವಿಕ್ಟರಿ ವೆಂಕಟೇಶ್‌ ಅವರ 75ನೇ ಚಿತ್ರ ‘ಸೈಂಧವ್‌’. ಶೈಲೇಶ್ ಕೊಲನು ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ಚಿತ್ರದ ಫಸ್ಟ್‌ಲುಕ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಲಾಗಿದೆ. ವೆಂಕಟೇಶ್‌ ಅವರು ಈ ಚಿತ್ರದಲ್ಲಿ ಗಂಭೀರ ಮುಖಭಾವದಲ್ಲಿ ಕಾಣಿಸಿದ್ದಾರೆ.

ವಿಕ್ಟರಿ ವೆಂಕಟೇಶ್ ಸರಣಿ ಯಶಸ್ಸಿನಲ್ಲಿರುವ ನಟ. ಈ ಚಿತ್ರದಲ್ಲೂ ಭಿನ್ನವಾಗಿ ಕಾಣಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದಿದೆ ಚಿತ್ರತಂಡ. ಹಾಗಾಗಿ ಫಸ್ಟ್‌ಲುಕ್‌ ಪೋಸ್ಟರ್‌ ಸಾಕಷ್ಟು ಕುತೂಹಲ ಹುಟ್ಟಿಸಿದೆ. ವೆಂಕಟ್ ಬೋಯನಪಲ್ಲಿ ಅವರು ನಿಹಾರಿಕಾ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ದೊಡ್ಡ ಮೊತ್ತದ ಬಂಡವಾಳವನ್ನೂ ಹೂಡಿದ್ದಾರೆ. ‘ಶ್ಯಾಮ್ ಸಿಂಗ್‌ ರಾಯ್’ ಈ ನಿರ್ಮಾಣ ಸಂಸ್ಥೆಯ ಯಶಸ್ವಿ ಸಿನಿಮಾ. ಈಗ ಇನ್ನೊಂದು ದೊಡ್ಡ ಬಜೆಟ್‌ನ ಸಿನಿಮಾವನ್ನು ತೆರೆಗೆ ತರಲು ಹೊರಟಿದೆ. ತಾರಾಗಣ, ತಂತ್ರಜ್ಞರು, ಸಂಗೀತ ಇತ್ಯಾದಿ ವಿವರಗಳನ್ನು ಶೀಘ್ರವೇ ಹಂಚಿಕೊಳ್ಳುತ್ತೇವೆ ಎಂದಿದೆ ಚಿತ್ರತಂಡ. 

ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ಮೂಡಿಬರಲಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು