ಶನಿವಾರ, ಅಕ್ಟೋಬರ್ 16, 2021
29 °C

ಆಕ್ಷನ್ ಥ್ರಿಲ್ಲರ್ ‘ಸನಕ್‘ ಟ್ರೈಲರ್ ಬಿಡುಗಡೆ: ಅ.15 ಕ್ಕೆ ಹಾಟ್‌ಸ್ಟಾರ್‌ನಲ್ಲಿ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾಲಿವುಡ್ ನಟ ವಿದ್ಯುತ್ ಜಮ್‌ವಾಲ್ ನಟನೆಯ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಸನಕ್‘ ಬಿಡುಗಡೆಗೆ ಸಿದ್ದವಾಗಿದ್ದು, ಇಂದು ಟ್ರೈಲರ್ ಬಿಡುಗಡೆಯಾಗಿದೆ.

ಟ್ರೈಲರ್ ಬಿಡುಗಡೆಗೆ ಉತ್ತಮ ಸ್ಪಂದನೆ ಸಿಕ್ಕಿದ್ದು ಈ ಸಿನಿಮಾ ಅಕ್ಟೋಬರ್ 15 ಕ್ಕೆ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ.

ಆಸ್ಪತ್ರೆಯೊಂದಕ್ಕೆ ನುಗ್ಗಿ ಅಲ್ಲಿನ ರೋಗಿಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಳ್ಳುವ ಉಗ್ರರನ್ನು ಅಲ್ಲಿಯೇ ಸಿಕ್ಕಿಹಾಕಿಕೊಂಡಿರುವ ಚಿತ್ರದ ನಾಯಕ ಹೇಗೆ ಎಲ್ಲರನ್ನೂ ಪಾರು ಮಾಡುತ್ತಾನೆ ಎಂಬ ಕಥೆಯನ್ನು ಈ ಚಿತ್ರ ಹೊಂದಿದೆ. ಟ್ರೈಲರ್‌ನಲ್ಲಿನ ಸಾಹಸ ದೃಶ್ಯಗಳ ತುಣಕುಗಳು ನೋಡುಗರನ್ನು ರೋಮಾಂಚನಗೊಳಿಸಿವೆ.

ಕಾನಿಶಕ್ ವರ್ಮಾ ನಿರ್ದೇಶನದ ‘ಸನಕ್’ ಸಿನಿಮಾವನ್ನು ವಿಪುಲ್ ಅಮೃತ್‌ಲಾಲ್ ಶಾ ಹಾಗೂ  ಜೀ ಸ್ಟುಡಿಯೊ ನಿರ್ಮಿಸಿದೆ. ವಿದ್ಯುತ್‌ಗೆ ನಾಯಕಿಯಾಗಿ ಬಂಗಾಳಿ ಸೂಪರ್‌ ಸ್ಟಾರ್ ರುಕ್ಮಿಣಿ ಮೈತ್ರಾ, ನೇಹಾ ದುಫಿಯಾ ಅಭಿನಯಿಸಿದ್ದಾರೆ.

 

ಕೊರೊನಾ ಎರಡನೇ ಅಲೆ ಲಾಕ್‌ಡೌನ್ ನಂತರ ಬಹುತೇಕ ಕಡೆ ಚಿತ್ರಮಂದಿರಗಳನ್ನು ಶೇ 100 ರಷ್ಟು ಭರ್ತಿ ಒಪ್ಪಂದದೊಂದಿಗೆ ತೆರೆಯಲು ಸರ್ಕಾರ ಅನುಮತಿ ನೀಡಿದ್ದರೂ, ಕೆಲ ದೊಡ್ಡ ದೊಡ್ಡ ಚಿತ್ರಗಳು ನೇರವಾಗಿ ಓಟಿಟಿಯಲ್ಲೇ ಬಿಡುಗಡೆಯಾಗುತ್ತಿರುವುದು ಚಿತ್ರಮಂದಿರಗಳ ಭವಿಷ್ಯದ ಮೇಲೆ ಮಂಕು ಕವಿಯುವಂತೆ ಮಾಡಿವೆ.

ಇದನ್ನೂ ಓದಿ: ಆರ್‌ಜಿವಿ ಆ್ಯಕ್ಷನ್‌ ಕಟ್‌ನಲ್ಲಿ ’ಡೇಂಜರಸ್‌’ ಆದ ಅಪ್ಸರಾ, ನೈನಾ ಗಂಗೂಲಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು