ಶನಿವಾರ, ಏಪ್ರಿಲ್ 4, 2020
19 °C

ಈ ನಟಿಯರೊಟ್ಟಿಗೆ ನಟಿಸಲು ದೇವರಕೊಂಡ ಉತ್ಸುಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕ್ರಾಂತಿ ಮಾಧವ್‌ ನಿರ್ದೇಶನದ ‘ವರ್ಲ್ಡ್‌ ಫೇಮಸ್‌ ಲವರ್’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದ ಬಳಿಕ ನಟ ವಿಜಯ್‌ ದೇವರಕೊಂಡ ಅವರ ಮಾರುಕಟ್ಟೆ ಮೌಲ್ಯವೂ ಕುಸಿದಿದೆ ಎಂಬುದು ಟಾಲಿವುಡ್‌ ಸಿನಿ ಪಂಡಿತರ ಲೆಕ್ಕಾಚಾರ. ಇದಕ್ಕೆ ಅವರು ಎದೆಗುಂದದೆ ಪುರಿ ಜಗನ್ನಾಥ್‌ ಜೊತೆಗೂಡಿ ‘ಫೈಟರ್‌’ ಆಗಲು ಸನ್ನದ್ಧರಾಗಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ಬಾಲಿವುಡ್‌ ನಟಿ ಅನನ್ಯಾ ಪಾಂಡೆ ಜೋಡಿ. ಬಾಲಿವುಡ್‌ನ ಹಲವು ನಟಿಯರ ಜೊತೆಗೆ ನಟಿಸಲು ಇಚ್ಛೆಯಿದೆ ಎಂದು ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. 

ಹಾಗಿದ್ದರೆ ಆ ನಟಿಯರು ಯಾರೆಂಬುದು ಅವರ ಅಭಿಮಾನಿಗಳ ಪ್ರಶ್ನೆ. ‘ನಟಿಯರಾದ ಕೈರಾ ಅಡ್ವಾಣಿ ಮತ್ತು ಜಾಹ್ನವಿ ಕಪೂರ್‌ ಜೊತೆಗೆ ನಟಿಸಲು ನನಗಿಷ್ಟ. ಈ ಇಬ್ಬರ ಜೊತೆಗೆ ನಟಿಸುವುದಷ್ಟೇ ನನ್ನ ಆಸೆಯಿಲ್ಲ. ಪ್ರತಿಭಾನ್ವಿತ ಹಾಗೂ ಸುಂದರವಾಗಿರುವ ಹೀರೊಯಿನ್‌ಗಳ ಜೊತೆಗೆ ನಟಿಸುವುದು ನನಗಿಷ್ಟ’ ಎಂದು ಉತ್ತರಿಸಿದ್ದಾರೆ ವಿಜಯ್‌ ದೇವರಕೊಂಡ. 

ನಾಲ್ಕು ವರ್ಷದ ಹಿಂದೆ ತೆರೆಕಂಡ ‘ಅರ್ಜುನ್‌ ರೆಡ್ಡಿ’ ಚಿತ್ರದ ಮೂಲಕ ಟಾಲಿವುಡ್‌ನಲ್ಲಿ ವಿಜಯ್ ಖ್ಯಾತಿಯ ಉತ್ತುಂಗಕ್ಕೇರಿದರು. ಅವರು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ನೆರವಾಗಿದ್ದು ಇದೇ ಚಿತ್ರ. ಈ ಸಿನಿಮಾ ಹಿಂದಿಗೂ ರಿಮೇಕ್‌ ಆಯಿತು. ಈ ಚಿತ್ರದ ಯಶಸ್ಸಿನ ನಂತರವೇ ಜಾಹ್ನವಿ ಕಪೂರ್‌ಗೆ ವಿಜಯ್‌ ಅವರ ಬಗ್ಗೆ ಗೊತ್ತಾಯಿತಂತೆ. ಕಳೆದ ವರ್ಷ ‘ಕರಣ್‌ ವಿಥ್‌ ಕಾಫಿ’ ಕಾರ್ಯಕ್ರಮದಲ್ಲಿ ಈ ಬಗ್ಗೆ ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದರು.

‘ವಿಜಯ್‌ ದೇವರಕೊಂಡ ಪ್ರತಿಭಾನ್ವಿತ ನಟ. ಅವರೊಟ್ಟಿಗೆ ನಾನು ನಟಿಸಲು ಸಿದ್ಧ’ ಎಂದಿದ್ದರು ಜಾಹ್ನವಿ. ಆಗ ಈ ಇಬ್ಬರೂ ಒಟ್ಟಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಯಾವುದೇ ಸಿನಿಮಾಕ್ಕೆ ಇಬ್ಬರೂ ಸಹಿ ಹಾಕಿಲ್ಲ.

 ಇದನ್ನೂ ಓದಿ: ವಿಜಯ್‌ ದೇವರಕೊಂಡ ಜೊತೆಯಾಗಲಿದ್ದಾರೆ ಜಾಹ್ನವಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು