ಮಂಗಳವಾರ, ಫೆಬ್ರವರಿ 25, 2020
19 °C

ಶಂಕರ್‌ ಚಿತ್ರಕ್ಕೆ ವಿಜಯ್‌ ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಇಂಡಿಯನ್‌ 2’ ಸಿನಿಮಾದಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಶಂಕರ್‌, ಆಧ್ಯಾತ್ಮಿಕ ವಿಷಯದ ಕುರಿತಂತೆ ಮತ್ತೊಂದು ಸಿನಿಮಾ ಮಾಡುವ ತಯಾರಿಯನ್ನೂ ನಡೆಸುತ್ತಿದ್ದಾರೆ. ಈ ಹೊಸ ಚಿತ್ರಕ್ಕೆ ನಾಯಕನ ಆಯ್ಕೆಯೂ ನಡೆದಿದೆ. ತಮಿಳು ನಟ ವಿಜಯ್‌ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.

‌‘ದಳಪತಿ 64’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ವಿಜಯ್‌, ತಮ್ಮ 65ನೇ ಸಿನಿಮಾದ ಬಗ್ಗೆ ಈಗಾಗಲೇ ಮಾತುಕತೆ ನಡೆಸಿಯಾಗಿದೆ. ಈಗ ಮತ್ತೊಂದು ಹೊಸ ಸಿನಿಮಾ ಬಗ್ಗೆ ಅವರು ಮಾತುಕತೆ ನಡೆಸಿದ್ದಾರೆ. ನಿರ್ದೇಶಕ ಶಂಕರ್‌ ಅವರ ಜೊತೆ ಹೊಸ ಚಿತ್ರದ ಕತೆ ಹಾಗೂ ಪಾತ್ರವರ್ಗದ ಬಗ್ಗೆ ಅವರು ಚರ್ಚೆ ನಡೆಸಿದ್ದಾರೆ. ಆದರೆ ಇದರ ಬಗ್ಗೆ ಅಧಿಕೃತ ಘೋಷಣೆ ಹೊರಬರಬೇಕಿದೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಶಂಕರ್‌ ಅವರು ‘ವಿಜಯ್‌ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದೇನೆ. ಸದ್ಯದಲ್ಲೇ ಆ ಸಿನಿಮಾ ಬಗ್ಗೆ ಘೋಷಿಸಲಿದ್ದೇನೆ’ ಎಂದು ಹೇಳಿದ್ದಾರೆ. ಈ ಸಿನಿಮಾ ಚಿತ್ರಕತೆ ಬಗ್ಗೆ ಬೇರೆ ಬೇರೆ ಸುದ್ದಿಗಳು ಕೇಳಿಬರುತ್ತಿದ್ದು, ವಿಜಯ್‌ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ಈ ಹಿಂದೆ ವಿಜಯ್‌ ಹಾಗೂ ಶಂಕರ್‌ ‘ನನ್‌ಬನ್‌’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಇದು ಬಾಲಿವುಡ್‌ನ ‘ತ್ರೀ ಈಡಿಯೆಟ್ಸ್‌’ ಚಿತ್ರದ ರಿಮೇಕ್‌. ಈಗ ಈ ಹೊಸ ಚಿತ್ರ ಯಾವುದಾದರೂ ಸಿನಿಮಾದ ರಿಮೇಕ್‌ ಆಗಿರುವುದೇ ಅಥವಾ ಸ್ವಮೇಕ್‌ ಚಿತ್ರವೇ ಎಂಬುದು ಗೊತ್ತಾಗಿಲ್ಲ.

ಸದ್ಯ ‘ಇಂಡಿಯನ್ 2’ ಸಿನಿಮಾದಲ್ಲಿ ಶಂಕರ್‌ ತೊಡಗಿಸಿಕೊಂಡಿದ್ದರೆ, ‘ದಳಪತಿ 64’ನಲ್ಲಿ ವಿಜಯ್‌ ಬ್ಯುಸಿಯಾಗಿದ್ದಾರೆ. ‘ದಳಪತಿ 64’ ಸಿನಿಮಾ ಬಿಡುಗಡೆಯಾದ ಬಳಿಕ ಈ ಸಿನಿಮಾ ಸೆಟ್ಟೇರುವ ಸಾದ್ಯತೆಯಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು