ಲಾಸ್ ಏಜಂಲೀಸ್: ಹಾಲೋವಿನ್ ಪಾರ್ಟಿ ವೇಳೆ ಗೆಳತಿಗೆ ಪ್ರಪೋಸ್ ಮಾಡುವ ಮೂಲಕ ಉದ್ಯಮಿ ವಿಜಯ್ ಮಲ್ಯ ಮಗ ಸಿದ್ದಾರ್ಥ್ ಮಲ್ಯ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದಾರೆ. ಈ ವಿಷಯವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹಾಲೋವಿನ್ ಕಾಸ್ಟೂಮ್‌ನಲ್ಲಿಯೇ ಗೆಳತಿ ಜಾಸ್ಮಿನ್‌ಗೆ ಪ್ರಪೋಸ್ ಮಾಡಿರುವ ಫೋಟೊಗಳನ್ನು ಸಿದ್ದಾರ್ಥ್ ಹಂಚಿಕೊಂಡಿದ್ದಾರೆ. ಸಿದ್ದಾರ್ಥ್ ಪ್ರೀತಿಗೆ ಜಾಸ್ಮಿನ್ ಒಪ್ಪಿಗೆ ಸೂಚಿಸಿದ್ದು, ಉಂಗುರ ಬದಲಾಯಿಸಿಕೊಂಡಿದ್ದಾರೆ.

ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಜನಿಸಿರುವ ಸಿದ್ದಾರ್ಥ್, ಲಂಡನ್ ಮತ್ತು ದುಬೈನಲ್ಲಿ ಹೆಚ್ಚಿನ ಸಮಯ ಕಳೆದಿದ್ದರು. ಲಂಡನ್‌ನ ವೆಲ್ಲಿಂಗ್‌ಟನ್ ಕಾಲೇಜು ಮತ್ತು ಕ್ವೀನ್ ಮೇರಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದರು. ನಟನೆಯಲ್ಲಿ ಆಸಕ್ತಿ ಹೊಂದಿದ್ದ ಸಿದ್ದಾರ್ಥ್ ರಾಯಲ್ ಸೆಂಟ್ರಲ್ ಸ್ಕೂಲ್ ಆಫ್ ಸ್ಪೀಚ್ ಅಂಡ್ ಡ್ರಾಮ ಕಾಲೇಜಿನಲ್ಲಿಯೂ ಅಧ್ಯಯನ ಮಾಡಿದ್ದರು.

ವ್ಯಾಸಂಗದ ನಂತರ ನಟನೆ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ವೃತ್ತಿ ಜೀವನ ಪ್ರಾರಂಭ ಮಾಡಿದ್ದ ಸಿದ್ದಾರ್ಥ್, ಹಲವಾರು ಟಿವಿ ಕಾರ್ಯಕ್ರಮದಲ್ಲಿಯೂ ಕಾಣಿಸಿಕೊಂಡಿದ್ದರು.

ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯೊಂದಿಗೆ ಡೇಟಿಂಗ್ ನಡೆಸುತ್ತಿರುವ ವಿಷಯಕ್ಕೆ ಸಿದ್ದಾರ್ಥ್ ಬಾರಿ ಸುದ್ದಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.