ನಟ ವಿಜಯ್ ದೇವರಕೊಂಡ ಸದ್ಯಕ್ಕೆ ತೆಲುಗು ಮಾತ್ರವಲ್ಲ ದಕ್ಷಿಣ ಭಾರತದ ಸಿನಿರಂಗಕ್ಕೆ ಹಾಟ್‌ಫೇವರಿಟ್ ಎಂದರೆ ತಪ್ಪಾಗಲಿಕ್ಕಿಲ್ಲ. ಆ ಮಟ್ಟಿಗೆ ಪ್ರೇಕ್ಷಕರು ಹಾಗೂ ಸಿನಿ ಉದ್ಯಮದಲ್ಲಿ ಸೆನ್ಸೇಶನ್ ನಟ ಎನ್ನಿಸಿಕೊಂಡಿದ್ದಾರೆ. ಬಾಲಿವುಡ್ ನಟಿಯರು ಕೂಡ ಇವರೊಂದಿಗೆ ನಟಿಸಲು ಆಸಕ್ತಿ ತೋರುತ್ತಿದ್ದಾರೆ. ಆ ಕಾರಣಕ್ಕೆ ಇವರ ಮುಂದಿನ ಸಿನಿಮಾಕ್ಕೆ ನಾಯಕಿ ಯಾರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚುತ್ತಿದೆ.

ಪುರಿ ಜಗನ್ನಾಥ್ ನಿರ್ದೇಶನದ ‘ಫೈಟರ್’ ಸಿನಿಮಾಕ್ಕೆ ವಿಜಯ್ ನಾಯಕ ಎಂಬುದು ಈಗ ಹಳೇ ಸುದ್ದಿ. ಬಾಲಿವುಡ್‌ನಲ್ಲೂ ವಿಜಯ್ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಕಾರಣಕ್ಕೆ ಹಿಂದಿ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಲು ನಿರ್ಧರಿಸಿದೆ ಫೈಟರ್ ತಂಡ. ಹಾಗಾಗಿ ಚಿತ್ರಕ್ಕೆ ಹೊಂದುವಂತಹ ನಾಯಕಿಯ ಹುಡುಕಾಟ ನಡೆದಿದೆ.

ನಟಿ ದಿವಂಗತ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಜೊತೆ ಚಿತ್ರತಂಡ ಮಾತುಕತೆ ನಡೆಸಿದೆ ಎಂಬ ಗಾಳಿಸುದ್ದಿಯೂ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಆದರೆ ಆಕೆ ₹ 7 ಕೋಟಿ ಸಂಭಾವನೆ ಕೇಳಿದ್ದು ಪುರಿ ಈ ಆಯ್ಕೆಯಿಂದ ಹಿಂದೆ ಸರಿದಿದ್ದಾರೆ. ಇತ್ತೀಚಿನ ಮಾಹಿತಿಯ ಪ್ರಕಾರ ಕಿಯಾರ ಅಡ್ವಾಣಿ ಫೈಟರ್‌ಗೆ ನಾಯಕಿಯಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ವಿಜಯ್ ಹಾಗೂ ಕಿಯಾರ ಕಿರುತೆರೆ ಕಾರ್ಯಕ್ರಮವೊಂದರಲ್ಲಿ ಕಮಾಲ್ ಮಾಡಿದ್ದರು.

ಆದರೆ ಕಿಯಾರ ಕೈಯಲ್ಲಿ ಈಗ ಸಾಕಷ್ಟು ಬಾಲಿವುಡ್ ಪ್ರೊಜೆಕ್ಟ್‌ಗಳಿವೆ. ಇವರ ಬಾಲಿವುಡ್‌ನ ಸ್ಟಾರ್ ನಟರುಗಳಾದ ಅಕ್ಷಯ್ ಕುಮಾರ್, ಕಾರ್ತಿಕ್ ಆರ್ಯನ್ ಹಾಗೂ ಸಿದ್ಧಾರ್ಥ್ ಮಲ್ಹೋತ್ರ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಆಕೆ ಬಾಲಿವುಡ್‌ನಲ್ಲಿ ಸ್ಟಾರ್ ನಟಿಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ವಿಜಯ್ ಜೊತೆ ನಟಿಸಲು ಒಪ್ಪುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.