ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಣೆಕ್ ಷಾ ಪಾತ್ರದಲ್ಲಿ ವಿಕ್ಕಿ ಕೌಶಲ್: ಪೋಸ್ಟರ್ ಹಂಚಿಕೊಂಡ ನಟ

Last Updated 28 ಜೂನ್ 2020, 11:11 IST
ಅಕ್ಷರ ಗಾತ್ರ

ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್‌ ಷಾ ಅವರ ಜೀವನಾಧಾರಿತ ಕಥೆಯನ್ನು ಸಿನಿಮಾ ಮಾಡಲಾಗುತ್ತಿದೆ. ಈ ಚಿತ್ರಕ್ಕೆ ಮೇಘನಾ ಗುಲ್ಜರ್ ನಿರ್ದೇಶನವಿದ್ದು ವಿಕ್ಕಿ ಕೌಶಲ್ ಮಾಣೆಕ್ ಷಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾಣೆಕ್ ಅವರ ಪುಣ್ಯಸ್ಮರಣೆಯ ನೆನಪಿನಲ್ಲಿವಿಕ್ಕಿ ಚಿತ್ರದ ಮೊದಲ ಲುಕ್‌ನ ಪೋಸ್ಟರ್ ಅನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಇದು 'ನನ್ನ ಜೀವನದ ವಿಶೇಷ ಪಯಣ' ಎಂದು ಬರೆದುಕೊಂಡಿದ್ದಾರೆ.

ಈ ಕುರಿತು ತಮ್ಮ ಟ್ವಿಟ್ಟರ್‌ ಖಾತೆಯಲ್ಲೂ ವಿಡಿಯೊ ಕ್ಲಿಪಿಂಗ್ ಒಂದನ್ನು ಹಂಚಿಕೊಂಡಿರುವ ವಿಕ್ಕಿ ‘ಭಾರತದ ಧೀಮಂತ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಷಾ ಅವರ ನೆನಪಿನೊಂದಿಗೆ. ಮೇಘನಾ ಗುಲ್ಜರ್, ರೋನಿ ಸ್ಕ್ರೂವಾಲಾ ಆರ್‌ಎಸ್‌ವಿಪಿಮೂವೀಸ್, ಶಾಂತನು ಎಸ್. ಅವರೊಂದಿಗಿನ ಈ ಪಯಣವು ನನಗೆ ತುಂಬಾ ವಿಶೇಷವಾದದ್ದು’ ಎಂದು ಬರೆದುಕೊಂಡಿದ್ದಾರೆ.

ಜೂನ್ 27 ಮಾಣೆಕ್ ಷಾ ಅವರು ಮರಣ ಹೊಂದಿದ ದಿನ. ಈ ಸಂದರ್ಭದ ನೆನಪಿನಲ್ಲಿ ಚಿತ್ರತಂಡದ ಹಲವರು ಪೋಸ್ಟ್ ಮಾಡಿದ್ದಾರೆ.

ನಿರ್ದೇಶಕಿ ಮೇಘನಾ ಗುಲ್ಜರ್ ಕೂಡ ಪೋಸ್ಟ್ ಮಾಡಿದ್ದು ‘ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಅವರ ನೆನಪಿನೊಂದಿಗೆ. ತುಂಬ ಗೌರವಾದರಗಳೊಂದಿಗೆ ನಾನು ಸಿನಿಮಾಕ್ಕಾಗಿ ಎದುರು ನೋಡುತ್ತಿದ್ದೇನೆ. ಒಬ್ಬ ಸಮರ್ಥ ಸೈನಿಕ ಹಾಗೂ ಸಂಭಾವಿತ ವ್ಯಕ್ತಿಯ ಪಾತ್ರಕ್ಕೆ ವಿಕ್ಕಿ ಜೀವ ತುಂಬುತ್ತಿದ್ದಾರೆ‘ ಎಂದು ಬರೆದುಕೊಂಡಿದ್ದಾರೆ.

ನಿರ್ಮಾಪಕಿ ರೋನಿ ಸ್ಕ್ರೂವಾಲಾ ಕೂಡ ಅವರ ನೆನಪಿನಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದು ‘ಧೀಮಂತ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಅವರ ಸವಿನೆನಪಿನೊಂದಿಗೆ. ಅವರ ಈ ಪಯಣವನ್ನು ತೆರೆ ಮೇಲೆ ತರಲು ಉತ್ಸುಕರಾಗಿದ್ದೇವೆ’ ಎಂದು ಬರೆದುಕೊಂಡಿದ್ದು ವಿಕ್ಕಿ ಕೌಶಲ್, ಮೇಘನಾ ಗುಲ್ಜರ್ ಮುಂತಾದವರನ್ನು ಟ್ಯಾಗ್ ಮಾಡಿದ್ದಾರೆ

ಏಪ್ರಿಲ್ 3, 1914 ರಲ್ಲಿ ಜನಿಸಿದ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಅಥವಾ ಸ್ಯಾಮ್ ಬಹದೂರ್ ಹೆಸರು ತುಂಬಾನೇ ಪರಿಚಿತ. 1971ರ ಭಾರತ–ಪಾಕಿಸ್ತಾನ ಯುದ್ಧದಲ್ಲಿ ಮಾಣೆಕ್ ಷಾ ಸೈನ್ಯಾಧಿಕಾರಿಯಾಗಿದ್ದರು

ಈ ಹಿಂದೆ ವಿಕ್ಕಿ ’ಈ ದೇಶಕ್ಕೆ ದೊರೆತ ಒಬ್ಬ ಮಹಾನ್ ಹೋರಾಟಗಾರರ ಮಾಣೆಕ್ ಷಾ. ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಅವರ ಪಾತ್ರದಲ್ಲಿ ನಟಿಸುತ್ತಿರುವುದಕ್ಕೆ ನನಗೆ ತುಂಬಾನೇ ಹೆಮ್ಮೆ ಎನ್ನಿಸುತ್ತಿದೆ. ಈ ಸಿನಿಮಾದ ಬಗ್ಗೆ ತುಂಬಾನೇ ಉತ್ಸುಕನಾಗಿದ್ದೇನೆ‘ ಎಂದು ಹೇಳಿಕೊಂಡಿದ್ದರು

A huge honour and an even bigger responsibility. #FieldMarshalSamManekshaw

Vicky Kaushal (@vickykaushal09) ರಿಂದ ಹಂಚಲಾದ ಪೋಸ್ಟ್ ಅವರು ರಂದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT