ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ನ ಹಿಂದೆ ಅಮಿತಾಬ್‌ ಚಿತ್ರ, ಬೆಚ್ಚಿಬಿದ್ದ ರೇಖಾ: ವಿಡಿಯೊ ವೈರಲ್‌

Last Updated 31 ಜನವರಿ 2019, 3:12 IST
ಅಕ್ಷರ ಗಾತ್ರ

ನವದೆಹಲಿ: ಸೆಲೆಬ್ರಿಟಿ ಫೋಟೊಗ್ರಾಫರ್‌ ದಬ್ಬೂ ರತ್ನಾನಿ ಅವರ ಇತ್ತೀಚಿನಕ್ಯಾಲೆಂಡರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ರೇಖಾ ಬೆನ್ನಿನ ಹಿಂದೆ ಗೋಡೆ ಮೇಲಿನ ಚಿತ್ರ ಕಂಡು ಬೆಚ್ಚಿ ಬಿದ್ದವರಂತೆ ಪಕ್ಕಕ್ಕೆ ಹೋಗಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಹಲವರು ಸಾಮಾಜಿಕ ಮಾಧ್ಯಮಗಳಲ್ಲಿಯೂ ವಿಡಿಯೊ ಹಂಚಿಕೊಂಡು ನಗೆಯಾಡಿದ್ದಾರೆ.

ಕಾರ್ಯಕ್ರಮದಲ್ಲಿ ನಟಿ ರೇಖಾ ಫೋಟೊಗ್ರಾಫರ್‌ಗಳಿಗೆ ಪೋಸ್‌ ನೀಡುತ್ತಿದ್ದರು. ತಾನು ನಿಂತಿರುವ ಜಾಗದ ಹಿನ್ನೆಲೆಯನ್ನು ಒಮ್ಮೆ ತಿರುಗಿ ನೋಡುತ್ತಿದ್ದಂತೆ ಗಾಬರಿಗೊಂಡರು. ಆ ಗೋಡೆಯ ಮೇಲೆ ನಟ ಅಮಿತಾಬ್‌ ಬಚ್ಚನ್‌ ಅವರ ಚಿತ್ರ ಇರುವುದನ್ನು ವಿಡಿಯೊದಲ್ಲಿ ಕಾಣಬಹುದು. ಕಪ್ಪು ಬಣ್ಣದ ಉಡುಗೆ ಧರಿಸಿದ್ದ ರೇಖಾ, ಡಿಸೈನರ್‌ ಸನ್‌ಗ್ಲಾಸ್‌ ಹಾಕಿದ್ದರು.

ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೊ ತುಣುಕು ಸಾಕಷ್ಟು ವೈರಲ್‌ ಆಗಿದೆ. ಕೆಲವು ಕ್ಷಣ ಫೋಟೊಗೆ ಪೋಸ್‌ ಕೊಟ್ಟು, ಗೋಡೆಯ ಮೇಲಿನ ಚಿತ್ರ ಕಂಡು ಪೋಸ್‌ ನೀಡುವುದರಿಂದ ಹಿಂದಕ್ಕೆ ಸರಿದರು. ಆದರೆ, ನಟಿ ವಿದ್ಯಾ ಬಾಲನ್ ಜತೆಗೆ ಮತ್ತೆ ಅದೇ ಜಾಗದಲ್ಲಿ ಪೋಸ್‌ ನೀಡಿರುವ ಚಿತ್ರಗಳು ಚರ್ಚೆಗೆ ಬಲ ನೀಡಿದೆ.

70ರ ದಶಕದಲ್ಲಿ ಬೆಳ್ಳಿ ತೆರೆಯ ಮೇಲೆ ರೇಖಾ–ಅಮಿತಾಬ್‌ ಜತೆಯಾಗಿ ಕಾಣಿಸಿಕೊಂಡಿದ್ದರು. ದೋ ಅಂಜಾನೆ, ಸಿಲ್ಸಿಲಾ ಹಾಗೂ ಮಿ.ನಟ್ವರ್‌ಲಾಲ್‌ ಸೇರಿ ಹಲವು ಚಿತ್ರಗಳಲ್ಲಿ ನಾಯಕ–ನಾಯಕಿಯಾಗಿ ಅಭಿನಯಿಸಿದ್ದಾರೆ. ’ಶಮಿತಾಬ್‌’ ಅಮಿತಾಬ್‌ ಮತ್ತು ರೇಖಾ ಒಂದೇ ಚಿತ್ರದಲ್ಲಿ ಅಭಿನಯಿಸಿದ ಕೊನೆಯ ಚಿತ್ರ. ಅದರಲ್ಲಿ ಬಿಗ್‌ ಬೀ ಪ್ರಮುಖ ಪಾತ್ರದಲ್ಲಿದ್ದು, ರೇಖಾ ವಿಶೇಷ ಪಾತ್ರ ಅಭಿನಯಿಸಿದ್ದರು. ಆದರೆ, ಇಬ್ಬರು ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ.

ಫೋಟೊಗ್ರಫರ್‌ ದಬ್ಬೂ ಪ್ರತಿ ವರ್ಷ ಸ್ಟಾರ್‌ಗಳನ್ನು ಕರೆಸಿ ಕ್ಯಾಲೆಂಡರ್‌ ಬಿಡುಗಡೆಗೊಳಿಸುತ್ತಾರೆ. ಬಹುತೇಕ ಹಿಂದಿನ ಎಲ್ಲ ಕ್ಯಾಲೆಂಡರ್‌ಗಳಲ್ಲಿ ಇತರೆ ನಟರ ಜತೆಗೆ ಅಮಿತಾಬ್‌ ಬಚ್ಚನ ಚಿತ್ರ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT