ಮಗುವಿನ ಫೋಟೋ ತೆಗೆಯಬೇಡಿ: ಮಾಧ್ಯಮಗಳಿಗೆ ವಿರಾಟ್-ಅನುಷ್ಕಾ ಮನವಿ

ಮುಂಬಯಿ: ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ, ನಿರ್ಮಾಪಕಿ ಅನುಷ್ಕಾ ಶರ್ಮಾ ದಂಪತಿ ಜನವರಿ 11ರಂದು ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಹೆಣ್ಣು ಮಗುವಿನ ತಂದೆಯಾಗಿರುವ ವಿಚಾರವನ್ನು ಸ್ವತಃ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದರು. ತಾರಾ ದಂಪತಿಯಾಗಿರುವ ಕಾರಣ ಸಹಜವಾಗಿಯೇ ಈ ಸುದ್ದಿ ಹೆಚ್ಚು ಪ್ರಚಾರ ಪಡೆದಿತ್ತು. ಆದರೆ ವಿರುಷ್ಕಾ ದಂಪತಿ ಬುಧವಾರ ಮಗುವಿನ ಕುರಿತಂತೆ ವಿಶೇಷ ಮನವಿಯೊಂದನ್ನು ಮಾಧ್ಯಮಗಳಿಗೆ ಮಾಡಿಕೊಂಡಿದ್ದಾರೆ.
ದಯವಿಟ್ಟು ಫೋಟೋ ತೆಗೆಯಬೇಡಿ..
ಸೆಲೆಬ್ರಿಟಿಗಳು ಹೋದಲ್ಲಿ ಬಂದಲ್ಲಿ ಬೆಂಬಿಡದೆ ಕಾಡುವ ಪಾಪರಾಝಿಗಳಿಗೆ (ಫೋಟೊಗ್ರಾಫರ್‌ಗಳು) ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಅದೇನೆಂದರೆ, ಪಾಲಕರಾಗಿ ನಾವು ಕೇಳಿಕೊಳ್ಳುವುದು ಇಷ್ಟೇ, ನಿಮ್ಮಲ್ಲೊಂದು ಕೋರಿಕೆಯಿದೆ. ನಮ್ಮ ಮಗುವಿನ ಖಾಸಗಿತನವನ್ನು ರಕ್ಷಿಸಬೇಕಿದೆ, ಅದಕ್ಕಾಗಿ ನಿಮ್ಮ ಸಹಕಾರ ಬೇಕಿದೆ. ಮಗುವಿನ ಫೋಟೋ ತೆಗೆಯಬೇಡಿ, ಸೂಕ್ತ ಸಂದರ್ಭದಲ್ಲಿ ನಾವೇ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ವಿರುಷ್ಕಾ ದಂಪತಿ ಕೇಳಿಕೊಂಡಿದ್ದಾರೆ.
ತಾರಾ ದಂಪತಿ
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಾರಾ ದಂಪತಿಯಾಗಿದ್ದು, ಕಳೆದ ಆಗಸ್ಟ್‌ನಲ್ಲಿ ಅನುಷ್ಕಾ ಗರ್ಭಿಣಿ ಎನ್ನುವುದನ್ನು ಸಾಮಾಜಿಕ ಮಾಧ್ಯಮ ಮೂಲಕ ಬಹಿರಂಗಪಡಿಸಿದ್ದರು. ಮದುವೆಗೂ ಮುನ್ನ ಇಬ್ಬರೂ ಹಲವು ಜಾಹೀರಾತುಗಳಲ್ಲಿ ಜತೆಯಾಗಿ ಅಭಿನಯಿಸಿದ್ದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.