ಅನುಷ್ಕಾ ಸೀರೆ ಬೆಲೆ ₹ 8 ಲಕ್ಷ!

7

ಅನುಷ್ಕಾ ಸೀರೆ ಬೆಲೆ ₹ 8 ಲಕ್ಷ!

Published:
Updated:
Deccan Herald

ಬಾಲಿವುಡ್‌ನಲ್ಲಿ ಈಚೆಗೆ ಕರ್ವಾ ಚೌತ್ ವ್ರತದ್ದೇ ಸುದ್ದಿಯಾಗಿತ್ತು. ಬಾಲಿವುಡ್‌ನ ಬಹುತೇಕ ವಿವಾಹಿತ ಸ್ಟಾರ್‌ ನಟಿಯರು ತಮ್ಮ ಪತಿಯರಿಗಗೆ ಒಳಿತಿಗಾಗಿ ಈ ವ್ರತವನ್ನು ಆಚರಿಸಿದ್ದರು. ಆ ಪೈಕಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಡದಿ ನಟಿ ಅನುಷ್ಕಾ ಶರ್ಮಾ ಸಹ ಒಬ್ಬರು.‌

ಕರ್ವಾ ಚೌತ್ ವ್ರತಕ್ಕೆ ಅನುಷ್ಕಾ ಉಟ್ಟಿದ್ದ ಹಳದಿ ಬಣ್ಣದ ಸೀರೆಯ ಬಗ್ಗೆ ನೆಟಿಗರ ಕಣ್ಣು ಬಿದ್ದಂತಿದೆ. ವ್ರತ ಆಚರಣೆ ಬಳಿಕ ಪೂರ್ಣ ಚಂದಿರ ಕಾಣುತ್ತಿದ್ದ ರಾತ್ರಿ ವೇಳೆ ಹಳದಿ ಬಣ್ಣದ ಸೀರೆ ಉಟ್ಟ ಅನುಷ್ಕಾ ವಿರಾಟ್ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದರು. ಅದನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದರು.

ಅನುಷ್ಕಾಳ ಆ ಸೀರೆಯ ಬೆಲೆ ಬಗ್ಗೆ ಯಾರೋ ಒಬ್ಬರು ಟ್ವಿಟರ್‌ನಲ್ಲಿ ಹಾಗೆ ಸುಮ್ಮನೆ ಚರ್ಚೆ ಆರಂಭಿಸಿದ್ದಾರೆ. ಅದರ ಬೆಲೆ ₹ 8 ಲಕ್ಷ ರೂಪಾಯಿ ಎನ್ನುವ ಮಾತುಗಳು ಬಾಲಿವುಡ್‌ ಅಂಗಳದಿಂದ ಹೊರಬಿದ್ದಿದೆ. ಇದೇ ಕಾರಣಕ್ಕೆ, ಆ ಫೋಟೊವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಫೋಟೊದ ಜೊತೆಗೆ, ‘ಮೈ ಮೂನ್, ಮೈ ಸನ್, ಮೈ ಸ್ಟಾರ್, ಮೈ ಎವ್ರಿಥಿಂಗ್ ಹ್ಯಾಪಿ ಕರ್ವ ಚೌತ್ ಟು ಆಲ್’ ಎಂದು ಅನುಷ್ಕಾ ಶುಭಕೋರಿದ್ದಾರೆ. ವಿರಾಟ್ ಸಹ ಪತ್ನಿಯೊಂದಿಗಿನ ಫೋಟೊ ಷೇರ್ ಮಾಡಿ ‘ಮೈ ಲೈಫ್ ಮೈ ಯುನಿವರ್ಸ್’ ಎಂದು ಟ್ವೀಟ್ ಮಾಡಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !