ಶುಕ್ರವಾರ, ಜುಲೈ 1, 2022
27 °C

ಮೋಹನದಾಸ್ ಟೀಸರ್ ಬಿಡುಗಡೆ: ವಿಕೃತ ಮನುಷ್ಯನಾದ ವಿಷ್ಣು ವಿಶಾಲ್!

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಮಿಳು ನಟ ವಿಷ್ಣು ವಿಶಾಲ್ ಮುಖ್ಯಪಾತ್ರದಲ್ಲಿರುವ ಮುರಳಿ ಕಾರ್ತಿಕ್ ನಿರ್ದೇಶನದ ‘ಮೋಹನದಾಸ್’ ಸಿನಿಮಾ ಟೀಸರ್ ಇಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

‘ರಾತ್ಸಸನ್’ ಕ್ರೈಮ್ ಥ್ರಿಲ್ಲರ್ ಸಿನಿಮಾ ಯಶಸ್ಸಿನ ನಂತರ ವಿಷ್ಣು ವಿಶಾಲ್ ಅವರು ವಿಭಿನ್ನ ಪಾತ್ರಗಳಿಗೆ ತೆರೆದುಕೊಳ್ಳುತ್ತಿದ್ದು, ಅಭಿಮಾನಿಗಳನ್ನು ಹೆಚ್ಚಿಸಿಕೊಂಡಿದ್ದಾರೆ.

ಮೋಹನದಾಸ್ ಸಿನಿಮಾ ಕೂಡ ಕ್ರೈಂ ಥ್ರಿಲ್ಲರ್ ಕಥಾ ಹಂದರವನ್ನೇ ಹೊಂದಿರುವಂತೆ ತೋರುತ್ತಿದ್ದು, ಇದರಲ್ಲಿ ವಿಷ್ಣು ವಿಶಾಲ್ ಒಬ್ಬ ವಿಕೃತ ಮನುಷ್ಯನಂತೆ ಬಿಂಬಿಸಲಾಗಿದೆ.

ಈ ಸಿನಿಮಾವನ್ನು ವಿಷ್ಣು ವಿಶಾಲ್ ಅವರೇ ನಿರ್ಮಿಸಿದ್ದು, ‘ಕಾವಲು’ ಎಂಬ ಸಿನಿಮಾ ಖ್ಯಾತಿಯ ಮುರಳಿ ಕಾರ್ತಿಕ್ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇಂದ್ರಜಿತ್ ಸುಕುಮಾರನ್, ಐಶ್ವರ್ಯ ರಾಜೇಶ್, ಕರುಣಾಕರನ್ ಅವರ ತಾರಾಗಣವಿದೆ. ಸಿನಿಮಾ ಮೇ ನಲ್ಲಿ ತೆರೆಗೆ ಬರುವ ಸಂಭವವಿದೆ ಎನ್ನಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು