ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೂಟ್ ಸೆಲೆಕ್ಟ್‌ನಲ್ಲಿ ‘ಪೆಟ್ರೋಮ್ಯಾಕ್ಸ್‌’, ಝೀ 5 ಒಟಿಟಿಯಲ್ಲಿ ‘ವಿಕ್ರಾಂತ್ ರೋಣ’

Last Updated 25 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಚಂದನವನದ ಪ್ರಮುಖ ಎರಡು ಚಿತ್ರಗಳು ಒಟಿಟಿ ವೇದಿಕೆಗಳಲ್ಲಿ ಪ್ರಸಾರವಾಗಲಿವೆ. ಹಾಸ್ಯ ಪ್ರಧಾನ ‘ಪೆಟ್ರೋಮ್ಯಾಕ್ಸ್‌’ ವೂಟ್‌ ಸೆಲೆಕ್ಟ್‌ನಲ್ಲಿ ಆ. 26ರಂದು ಪ್ರಸಾರವಾಗಲಿದೆ. ವಿಜಯಪ್ರಸಾದ್‌ ನಿರ್ದೇಶನದ ಸಿನಿಮಾ ಇದು.ಸತೀಶ್ ನೀನಾಸಂ, ಹರಿಪ್ರಿಯಾ, ನಾಗಭೂಷಣ್, ಕಾರುಣ್ಯ ರಾಂ, ಅಚ್ಯುತ್ ಕುಮಾರ್, ಸುಮನ್ ರಂಗನಾಥನ್ ಮತ್ತು ಅರುಣ್ ಕುಮಾರ್ ತಾರಾಗಣದಲ್ಲಿದ್ದಾರೆ.

‘ಪೆಟ್ರೋಮ್ಯಾಕ್ಸ್’ ಚಿತ್ರವು ನಾಲ್ವರು ಅನಾಥರ ಜೀವನದ ಮೇಲೆ ಕೇಂದ್ರೀಕೃತವಾಗಿದೆ. ಊದುಬತ್ತಿ ಶಿವಪ್ಪ, ಅಗರಬತ್ತಿ ಮಾದಪ್ಪ, ಕೃಷ್ಣಮೂರ್ತಿ ಮತ್ತು ಕವಿತಾ ಕೃಷ್ಣಮೂರ್ತಿ ಪಾತ್ರಧಾರಿಗಳಾಗಿದ್ದಾರೆ. ಏಕಾಂಗಿ ಜೀವನದ ಪ್ರಯೋಗಗಳು ಮತ್ತು ಕ್ಲೇಶಗಳನ್ನು ಬಿಂಬಿಸುವ ಈ ಚಿತ್ರವು ಒಡನಾಟ, ಮಾನವ ಸಂಬಂಧಗಳು ಮತ್ತು ಒಗ್ಗಟ್ಟಿನ ಸಾರವನ್ನು ವಿವರಿಸುತ್ತದೆ ಎಂದಿದೆ ಚಿತ್ರತಂಡ.

ವಿಕ್ರಾಂತ್‌ ರೋಣ: ಜುಲೈ 28ರಂದು ಬಿಡುಗಡೆಯಾಗಿದ್ದ ‘ವಿಕ್ರಾಂತ್‌ ರೋಣ’ ಈಗ ಝೀ 5 ಒಟಿಟಿಯಲ್ಲಿ ಸೆ. 2ರಂದು ಪ್ರಸಾರವಾಗಲಿದೆ.ಕಿಚ್ಚ ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್‌ನ ಚಿತ್ರವಿದು. ಜಾಕ್ ಮಂಜು ನಿರ್ಮಾಣದಲ್ಲಿ ಅದ್ಧೂರಿಯಾಗಿ ತಯಾರಾಗಿದ್ದ ವಿಕ್ರಾಂತ್ ರೋಣ ಸಿನಿಮಾದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸುದೀಪ್ ಜೊತೆಗೆ ಹೆಜ್ಜೆ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT