ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೈಲರ್‌ ನೋಡಿ: ಶ್ರೀವಿಷ್ಣು ಅವತಾರದಲ್ಲಿ 'ಲಕ್ಕಿಮ್ಯಾನ್' ಅಪ್ಪು

Last Updated 1 ಸೆಪ್ಟೆಂಬರ್ 2022, 10:00 IST
ಅಕ್ಷರ ಗಾತ್ರ

ಬೆಂಗಳೂರು: ಪುನೀತ್‌ ರಾಜ್‌ಕುಮಾರ್‌ ಅವರು ಅತಿಥಿ ಪಾತ್ರದಲ್ಲಿ ನಟಿಸಿರುವ'ಲಕ್ಕಿಮ್ಯಾನ್' ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಡಾರ್ಲಿಂಗ್‌ ಕೃಷ್ಣ ನಾಯಕ ನಟರಾಗಿ ಅಭಿನಯ ಮಾಡಿದ್ದಾರೆ. ತ್ರಿಕೋನ ಪ್ರೇಮ ಕಥೆಯ ಈ ಸಿನಿಮಾದಲ್ಲಿ ಪುನೀತ್‌ ದೇವರಾಗಿ ಬಂದುಡಾರ್ಲಿಂಗ್‌ ಕೃಷ್ಣನ ಸಂಕಷ್ಟಗಳನ್ನು ಪರಿಹರಿಸುತ್ತಾರೆ. ಸಿನಿಮಾದಲ್ಲಿ ಅಪ್ಪು ಮಸ್ತ್‌ ಹೆಜ್ಜೆ ಹಾಕಿದ್ದಾರೆ. ಇವರ ಜೊತೆಗೆ ತಮಿಳು ನಟ ಪ್ರಭುದೇವ ಕೂಡ ಡ್ಯಾನ್ಸ್‌ ಮಾಡಿದ್ದಾರೆ.

ಟ್ರೈಲರ್‌ ಕೊನೆಯಲ್ಲಿಪುನೀತ್ ರಾಜ್‌ಕುಮಾರ್ ಶ್ರೀವಿಷ್ಣುವಿನ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಟ್ರೈಲರ್‌ ಬಿಡುಗಡಗೆಯಾಗಿ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆ ಕಂಡಿದೆ. ಅಪ್ಪು ಅಭಿಮಾನಿಗಳು ಸಹ ಟ್ರೈಲರ್‌ ಮೆಚ್ಚಿಕೊಂಡಿದ್ದಾರೆ.

ಈ ಚಿತ್ರಕ್ಕೆ ವಿಜಯ್‌ ವಿಕ್ಕಿ ಸಂಗೀತ ನೀಡಿದ್ದಾರೆ. ಈಗಾಗಲೇ ಹಾಡುಗಳುಸೂಪರ್ ಹಿಟ್ ಆಗಿವೆ.ಸಾಧು ಕೋಕಿಲ, ನಾಗಭೂಷಣ್, ಸುಂದರ್‌ ರಾಜ್‌, ರೋಶನಿ ಸೇರಿದಂತೆ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ.

ತಮಿಳಿನ 'ಓ ಮೈ ಕಡವುಲೇ' ಚಿತ್ರದ ರೀಮೇಕ್ ಆಗಿರುವ ಈ ಚಿತ್ರವನ್ನು ಎಸ್‌ ನಾಗೇಂದ್ರ ಪ್ರಸಾದ್‌ ನಿರ್ದೇಶನ ಮಾಡಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT