ಶುಕ್ರವಾರ, ಮಾರ್ಚ್ 31, 2023
32 °C

ವಿಚ್ಛೇದನ ಘೋಷಣೆ: ನಾವಿಬ್ಬರೂ ಈಗಲೂ ಒಂದೇ ಕುಟುಂಬ ಎಂದ ಆಮಿರ್ ಖಾನ್- ಕಿರಣ್ ರಾವ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ನಟ ಆಮಿರ್‌ ಖಾನ್‌ ಮತ್ತು ನಿರ್ಮಾಪಕಿ ಕಿರಣ್‌ ರಾವ್‌ ಶನಿವಾರವಷ್ಟೇ (ಜು.3) ತಮ್ಮ 15 ವರ್ಷಗಳ ದಾಂಪತ್ಯ ಜೀವನವನ್ನು ವಿಚ್ಛೇದನದ ಮೂಲಕ ಅಂತ್ಯಗೊಳಿಸಲು ನಿರ್ಧರಿಸಿರುವುದಾಗಿ ಘೋಷಿಸಿದ್ದರು. ಆದರೆ ಅವರ ಸಂಬಂಧ ಬೇರೆಯಾದರೂ ಕೂಡ ನಾವು ಒಂದೇ ಕುಟುಂಬ ಎಂದು ಹೇಳುವ ಮೂಲಕ ಒಟ್ಟಾಗಿ ಇರುವುದಾಗಿ ತಿಳಿಸಿದ್ದರು.

ಇದೀಗ ಸೆಲೆಬ್ರಿಟಿ ಛಾಯಾಗ್ರಾಹಕ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿರುವ ವಿಡಿಯೊದಲ್ಲಿ, ಆಮಿರ್ ಮತ್ತು ಕಿರಣ್ ಅವರು ಸಂತೋಷದಿಂದ ಇದ್ದೇವೆ ಮತ್ತು ಯಾವಾಗಲೂ ನಾವಿಬ್ಬರು ಒಬ್ಬರಿಗೊಬ್ಬರು ಜೊತೆಯಾಗಿರುವುದಾಗಿ ಅಭಿಮಾನಿಗಳಿಗೆ ಭರವಸೆ ನೀಡುವಾಗ ಕೈ ಹಿಡಿದುಕೊಂಡಿರುವುದು ಕಂಡುಬಂದಿದೆ.

2011 ರಲ್ಲಿ ಜನಿಸಿದ ತಮ್ಮ ಮಗ ಆಜಾದ್‌ನ ತಂದೆ-ತಾಯಿಯಾಗಿ ಮುಂದೆಯೂ ಇರುತ್ತೇವೆ. ನಾವಿಬ್ಬರು ಜೊತೆಯಾಗಿಯೇ ಆತನನ್ನು ಬೆಳೆಸುತ್ತೇವೆ. ಇದಲ್ಲದೆ ಪಾನಿ ಫೌಂಡೇಶನ್‌ನೊಂದಿಗೆ ಸಂಬಂಧವನ್ನು ಮುಂದುವರಿಸುತ್ತೇವೆ ಎಂದು ಇಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: 

ಆಮಿರ್ ಖಾನ್ ಮತ್ತು ಕಿರಣ್ ರಾವ್ ಅವರು 2001ರ ಅಶುತೋಷ್ ಗೋವಾರಿಕರ್ ನಿರ್ದೇಶನ ಸಿನಿಮಾ 'ಲಗಾನ್' ಸಿನಿಮಾದ ಚಿತ್ರೀಕರಣದ ವೇಳೆ ಭೇಟಿಯಾಗಿದ್ದರು. ಬಳಿಕ 2005ರಲ್ಲಿ ವಿವಾಹವಾಗಿದ್ದರು. ಇವರಿಬ್ಬರು ಆಮಿರ್ ಖಾನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ದೆಲ್ಹಿ ಬೆಲ್ಲಿ, ಪೀಪ್ಲಿ ಲೈವ್ ಮತ್ತು ದಂಗಲ್ ಸಿನಿಮಾಗಳನ್ನು ನಿರ್ಮಿಸಿದ್ದರು.

ಕಿರಣ್ ರಾವ್ ನಿರ್ದೇಶನದ ಚೊಚ್ಚಲ ಚಿತ್ರ ಧೋಬಿ ಘಾಟ್‌ನಲ್ಲಿ ಆಮಿರ್ ಖಾನ್ ಪ್ರಮುಖ ಪಾತ್ರವನ್ನು ನಿಭಾಯಿಸಿದ್ದರು. ಸಕಾರಾತ್ಮಕ ವಿಮರ್ಶೆಗಳ ಹೊರತಾಗಿಯೂ ಈ ಚಿತ್ರವು 'ಸಾಧಾರಣ ಗಳಿಕೆ' ಕಂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು