ಶುಕ್ರವಾರ, ಅಕ್ಟೋಬರ್ 7, 2022
28 °C

ಆ. 26ಕ್ಕೆ ‘ವಿಕಿಪೀಡಿಯ’ ತೆರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಶವಂತ್ ನಟನೆಯ ‘ವಿಕಿಪೀಡಿಯ’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಆ. 26ಕ್ಕೆ ಚಿತ್ರ ಬಿಡುಗಡೆ ಆಗಲಿದೆ. ಹಲವು ಧಾರಾವಾಹಿಗಳಲ್ಲಿ ಮಿಂಚಿದ ನಟ ಯಶವಂತ್‌ ಈ ಚಿತ್ರದ ನಾಯಕ. ಯಶವಂತ್‌ ಅವರಿಗೆ ಇದು ಬೆಳ್ಳಿತೆರೆಯ ಮೊದಲ ಹೆಜ್ಜೆ. 

‘ಜಗತ್ತಿನಲ್ಲಿ ಎರಡು ರೀತಿ ಜನ ಇದ್ದಾರೆ. ಒಂದು ವಿಕಿಪೀಡಿಯದಲ್ಲಿ ಕಾಣಿಸುವವರು. ಇನ್ನೊಂದು ಅಲ್ಲಿ ಇಲ್ಲದಿರುವವರು. ವಿಕಿಪೀಡಿಯದಲ್ಲಿ ಇಲ್ಲದೇ ಇರುವ ವಿಕಾಸ್ (ಯಶವಂತ್‌) ತನ್ನ ಕಥೆ ಹೇಳಲು ಈ ಚಿತ್ರದ ಮೂಲಕ ಬರುತ್ತಿದ್ದಾನೆ. ಯಶವಂತ್ ಅದ್ಭುತವಾಗಿ ನಟಿಸಿದ್ದು, ಇವರಿಗೆ ಜೋಡಿಯಾಗಿ ಆಶಿಕಾ ಸೋಮಶೇಖರ್ ಕಾಣಿಸಿಕೊಂಡಿದ್ದಾರೆ’ ಎಂದರು ನಿರ್ದೇಶಕ ಸೋಮು ಹೊಯ್ಸಳ.

ಟ್ರೇಲರ್ ಬಗ್ಗೆ ಮಾತನಾಡಿದ ಯಶವಂತ್, ‘ಪ್ರಪಂಚದಲ್ಲಿ ಎರಡು ರೀತಿ ಜನ ಅಲ್ಲ. ಮೂರು ರೀತಿ ಜನ ಇರ್ತಾರೆ. ಆ ಮೂರನೆಯವರೇ ನಾವು. ‘ವಿಕಿಪೀಡಿಯ’ದಲ್ಲಿ ತಮ್ಮ ಹೆಸರು ಬರಲು ಹೊರಟವರ ಗುಂಪಿಗೆ ನಾನು ನನ್ನ ತಂಡ ಸೇರುತ್ತದೆ ಅನಿಸುತ್ತದೆ. ಮೂರು ವರ್ಷ ಕಷ್ಟಪಟ್ಟು ಸಿ‌ನಿಮಾ ಮಾಡಿದ್ದೇವೆ’ ಬೆಂಬಲ ನೀಡಿ ಎಂದರು.

ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ವಿಕಿಪೀಡಿಯ ಸಿನಿಮಾಗೆ ಸೋಮು ಹೊಯ್ಸಳ ಆ್ಯಕ್ಷನ್‌ ಕಟ್ ಹೇಳಿದ್ದಾರೆ. ಇದು ಇವರಿಗೆ ಚೊಚ್ಚಲ ಸಿನಿಮಾ. ಡ್ರಾಮಾ, ಎಮೋಷನಲ್, ಲವ್, ಸೆಂಟಿಮೆಂಟ್ ಎಲ್ಲದರ ಮಿಶ್ರಣ ವಿಕಿಪೀಡಿಯ ಚಿತ್ರಕ್ಕೆ ಚಿದಾನಂದ್ ಎಚ್‌.ಕೆ. ಅವರ ಛಾಯಾಗ್ರಹಣ,  ರಾಕೇಶ್ ಅವರ ಸಂಗೀತ, ರವಿಚಂದ್ರನ್ ಸಿ. ಸಂಕಲನವಿದೆ. ರಫ್ ಕಟ್ ಪ್ರೊಡಕ್ಷನ್ ಅಡಿ ನಿರ್ಮಾಣವಾಗಿರುವ ಸಿನಿಮಾಗೆ ಯು/ಎ ಪ್ರಮಾಣಪತ್ರ ಸಿಕ್ಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು