ಬುಧವಾರ, ಆಗಸ್ಟ್ 17, 2022
30 °C

‘ಜೇಮ್ಸ್‌’ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಮರಳಲಿದ್ದಾರಾ ನಾಸಿರುದ್ದಿನ್‌ ಶಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪುನೀತ್‌ ರಾಜ್‌ಕುಮಾರ್ ಹಾಗೂ ಪ್ರಿಯಾ ಆನಂದ್‌ ನಟನೆಯ ಬಹುನಿರೀಕ್ಷಿತ ಜೇಮ್ಸ್ ಚಿತ್ರದಲ್ಲಿ ಬಾಲಿವುಡ್‌ನ ಖ್ಯಾತ ನಟ ನಾಸಿರುದ್ದಿನ್ ಶಾ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ. ಮುಖ್ಯಪಾತ್ರವೊಂದರಲ್ಲಿ ನಟಿಸಲು ನಾಸಿರುದ್ದಿನ್‌ ಶಾ ಅವರನ್ನು ಕರೆ ತರುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ ಎನ್ನಲಾಗುತ್ತಿದೆ. ಕಳೆದ ತಿಂಗಳು ಈ ಚಿತ್ರದ ಶೂಟಿಂಗ್ ಹೊಸಪೇಟೆಯಲ್ಲಿ ನಡೆದಿತ್ತು.

ಒಂದು ವೇಳೆ ಚಿತ್ರತಂಡ ನಾಸಿರುದ್ದಿನ್‌ ಅವರ ಡೇಟ್ಸ್‌ ಪಡೆಯಲು ಯಶಸ್ಸಿಯಾದರೆ 30 ವರ್ಷಗಳ ಬಳಿಕ ಮತ್ತೆ ಚಂದನವನಕ್ಕೆ ಮರಳುತ್ತಾರೆ ಈ ಖ್ಯಾತ ನಟ. 30 ವರ್ಷಗಳ ಹಿಂದೆ ನಾಸಿರುದ್ದಿನ್ ಶಾ ತಬ್ಬಲಿಯು ನೀನಾದೆ ಮಗನೆ ಹಾಗೂ ಮನೆ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ 1989ರಲ್ಲಿ ಬಿಡುಗಡೆಯಾಗಿತ್ತು.

‘ರಾಜಕುಮಾರ’ ನಂತರ ಎರಡನೇ ಬಾರಿ ಪುನೀತ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಪ್ರಿಯಾ ಆನಂದ್‌. ಹೊಸಪೇಟೆಯಲ್ಲಿ ನಡೆದ ಶೂಟಿಂಗ್ ಸಮಯದಲ್ಲಿ ಪುನೀತ್ ಅಂಜನಾದ್ರಿ ಬೆಟ್ಟ ಹತ್ತಿದ್ದರು. ಆ ವಿಡಿಯೊವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ತುಂಬಾನೇ ವೈರಲ್ ಆಗಿತ್ತು.

ಜೇಮ್ಸ್‌ನಲ್ಲಿ ಆದಿತ್ಯ ಮೆನನ್, ಶ್ರೀಕಾಂತ್ ಹಾಗೂ ಅನು ಪ್ರಭಾಕರ್ ಪ್ರಧಾನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕಿಶೋರ್‌ ಪತಿಕೊಂಡ ಹಾಗೂ ಚರಣ್‌ರಾಜ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಶ್ರೀಷಾ ಕುಡುವಳ್ಳಿ ಸಿನಿಮಾಟೊಗ್ರಫಿ ಚಿತ್ರಕ್ಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು