ಅನೂಪ್ ಭಂಡಾರಿ ಸದ್ಯ ಸುದೀಪ್ ನಟನೆಯ ‘ಫ್ಯಾಂಟಮ್’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದರ ಜೊತೆ ಜೊತೆಗೆ ಇನ್ನೊಂದು ಪ್ರಾಜೆಕ್ಟ್ ಮೇಲೆ ಕೆಲಸ ಮಾಡುತ್ತಿದ್ದಾರೆ ರಂಗೀತರಂಗ ಖ್ಯಾತಿಯ ಈ ನಿರ್ದೇಶಕ. ಅನೂಪ್ ಮತ್ತೊಂದು ಬಿಗ್ಬಜೆಟ್ ಸಿನಿಮಾ ಮಾಡಲಿದ್ದಾರೆ ಎಂಬುದು ಈ ಹಿಂದೆಯೇ ವರದಿಯಾಗಿತ್ತು. ಆದರೆ ಸದ್ಯದ ಮಾಹಿತಿಯ ಪ್ರಕಾರ ಅನೂಪ್ ಪೌರಾಣಿಕ ಹೀರೊ ಅಶ್ವತ್ಥಾಮನ ಕತೆಯನ್ನು ಸಿನಿಮಾ ಮಾಡಲು ಹೊರಟಿದ್ದಾರಂತೆ.

ಕಳೆದ ಸೆಪ್ಟೆಂಬರ್ನಲ್ಲಿ ಹೊಸ ಚಿತ್ರದ ಬಗ್ಗೆ ಘೋಷಣೆ ಮಾಡಿದ್ದರು ಅನೂಪ್. ಸುದೀಪ್ ಈ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದರು. ಮೂಲಗಳ ಪ್ರಕಾರ ಸುದೀಪ್ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ಅವರು ಅಶ್ವತ್ಥಾಮನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರಂತೆ. ಆದರೆ ಚಿತ್ರದ ಕುರಿತು ಇನ್ನೂ ಅಧಿಕೃತ ಮಾಹಿತಿ ತಿಳಿಸಿಲ್ಲ ಚಿತ್ರತಂಡ.

ಅನೂಪ್ ಈ ಹಿಂದೆ ಹೊಸ ಸಿನಿಮಾ ಕುರಿತು ಮಾತನಾಡಿದ್ದು ‘ನಾನು ಚಿತ್ರದ ಮೊದಲ ಭಾಗದ ಸ್ಕ್ರಿಪ್ಟ್ ಕೆಲಸವನ್ನು ಬರೆದು ಮುಗಿಸಿದ್ದೇನೆ, ನನಗೆ ಯಾವಾಗ ಸಮಯ ಸಿಗುತ್ತದೋ ಆಗ ಎರಡನೇ ಭಾಗದ ಕೆಲಸವನ್ನು ಮುಗಿಸುತ್ತೇನೆ. ಈಗಾಗಲೇ ಎರಡು ವರ್ಷದಿಂದ ಈ ಕಥೆಯ ಮೇಲೆ ಕೆಲಸ ಮಾಡುತ್ತಿದ್ದೇನೆ. ಫ್ಯಾಂಟಮ್ ಚಿತ್ರ ಮುಗಿದ ಬಳಿಕವಷ್ಟೇ ಈ ಚಿತ್ರದ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.