ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ನನ್ನ ಕೊನೆಯ ಲವ್‌ ಸ್ಟೋರಿ ಎಂದ ‘ವರ್ಲ್ಡ್ ಫೇಮಸ್ ಲವರ್‘ ವಿಜಯ್ ದೇವರಕೊಂಡ

Last Updated 7 ಫೆಬ್ರವರಿ 2020, 6:28 IST
ಅಕ್ಷರ ಗಾತ್ರ

ಹೈದರಾಬಾದ್‌: ವಿಜಯ್ ದೇವರಕೊಂಡ ಅಭಿನಯದ ವರ್ಲ್ಡ್ ಫೇಮಸ್ ಲವರ್ ಚಿತ್ರದ ಟ್ರೇಲರ್‌ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದುಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ರೆಸ್ಪಾನ್ಸ್‌ ದೊರೆತಿದೆ.

ಬಿಡುಗಡೆಯಾಗಿ 19 ಗಂಟೆಗಳಲ್ಲೇ 34 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ವಿಜಯ್‌ ದೇವರಕೊಂಡ ಮೂವರು ನಾಯಕಿಯರ ಜೊತೆ ರೊಮ್ಯಾನ್ಸ್‌ ಮಾಡಿದ್ದಾರೆ.

ಟ್ರೇಲರ್‌ ಬಿಡುಗಡೆಯಾದ ಬಳಿಕ ಟ್ವೀಟ್‌ ಮಾಡಿರುವ ವಿಜಯ್‌ ದೇವರಕೊಂಡು ‘ಇದು ನನ್ನ ಕೊನೆಯ ಲವ್‌ ಸ್ಟೋರಿ ಎಂದು ಹೇಳಿದ್ದಾರೆ. ಈ ಚಿತ್ರಕ್ಕಾಗಿ ನಾನು ಸಾಕಷ್ಟು ಕಷ್ಟಪಟ್ಟಿದ್ದೇನೆ ಎಂದು ಟ್ರೇಲರ್‌ ಬಿಡುಗಡೆ ಸಂದರ್ಭದಲ್ಲಿ ವಿಜಯ್‌ ದೇವರಕೊಂಡ ಹೇಳಿದ್ದಾರೆ.

ಕ್ರಾಂತಿ ಮಾಧವ್‌ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ವಿಜಯ್‌ಗೆ ನಾಯಕಿಯರಾಗಿ ರಾಶಿ ಖನ್ನಾ, ಐಶ್ವರ್ಯಾ ರಾಜೇಶ್, ಇಸಬೆಲ್ಲಾ ಲೈಟ್ ನಟಿಸಿದ್ದಾರೆ. ಕೆ.ಎ.ವಲ್ಲಭ ಅವರ ನಿರ್ಮಾಣ ಮಾಡಿದ್ದು ಗೋಪಿ ಸುಂದರ್‌ ಸಂಗೀತ ನಿರ್ದೇಶನ ಮಾಡಿದ್ದಾರೆ.

ಈಗಾಗಲೇ ‘ವರ್ಲ್ಡ್‌ ಫೇಮಸ್‌ ಲವರ್‌‘ ಸಿನಿಮಾದ ಫಸ್ಟ್‌ಬುಕ್‌ ಮತ್ತು ಟೀಸರ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಈ ಚಿತ್ರ ಪ್ರೇಮಿಗಳ ದಿನದಂದು (ಫೆ.14) ಬಿಡುಗಡೆಯಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT