ಶನಿವಾರ, ಸೆಪ್ಟೆಂಬರ್ 26, 2020
26 °C

ವಿಶ್ವದಲ್ಲೇ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಅಕ್ಷಯ್ ಕುಮಾರ್‌ಗೆ 6ನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿನಿಮಾ ನಟರು ಕೂತರು ಸುದ್ದಿ, ನಿಂತರೂ ಸುದ್ದಿ. ಆದರೆ ಕೆಲ ನಟರು ತಮ್ಮ ಕೆಲಸ ಹಾಗೂ ಸಾಧನೆಗಳಿಂದ ಸುದ್ದಿಯಾಗುತ್ತಿರುತ್ತಾರೆ. ಈ ಸಾಲಿಗೆ ಸೇರುವವರು ಬಾಲಿವುಡ್ ಸೂಪರ್‌ ಸ್ಟಾರ್ ನಟ ಅಕ್ಷಯ್ ಕುಮಾರ್. 

ಇತ್ತೀಚೆಗೆ ದೇಣಿಗೆ ನೀಡುವುದು ಹಾಗೂ ತಮ್ಮ ಚಾರಿಟಿ ವತಿಯಿಂದ ಸಾಮಾಜಿಕ ಸೇವೆಗಳನ್ನು ಮಾಡುವ ಕಾರಣಗಳಿಂದ ಅಕ್ಷಯ್‌ ಸುದ್ದಿಯಾಗಿದ್ದರು. ಈಗ ವಿಶ್ವದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಳ್ಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ‌. ಪೋರ್ಬ್ಸ್‌ ಮ್ಯಾಗಜಿನ್‌ ಬಿಡುಗಡೆ ಮಾಡಿದ ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಅಕ್ಷಯ್ 6ನೇ ಸ್ಥಾನ ಪಡೆದಿದ್ದಾರೆ. 

ಜೂನ್‌ 2019ರಿಂದ ಜೂನ್ 2020ರವರೆಗೆ ₹362 ಕೋಟಿ ಹಣ ಸಂಪಾದಿಸಿದ್ದಾರೆ ಅಕ್ಷಯ್. ಪೋರ್ಬ್ಸ್ ಪಟ್ಟಿಯ ಟಾಪ್ 10ರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಟ ಅಕ್ಷಯ್ ಎಂಬ ಹೆಗ್ಗಳಿಕೆಯೂ ಇವರದ್ದು. ಉತ್ಪನ್ನಗಳ ಜಾಹೀರಾತುಗಳಿಂದ ಇವರು ಹೆಚ್ಚು ಗಳಿಕೆ ಮಾಡಿದ್ದಾರೆ ಎಂದಿದೆ ಪೋರ್ಬ್ಸ್‌.

ಕುಸ್ತಿಪಟು ಆಗಿದ್ದ ಹಾಲಿವುಡ್‌ ನಟ ಡ್ವೇನ್ ಜಾನನ್ಸ್ ವಿಶ್ವದಲ್ಲೇ ಅತೀ ಹೆಚ್ಚು ಸಂಪಾದನೆ ಮಾಡುವ ನಟ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಸಿನಿಮಾ ಹಿನ್ನೆಲೆ ಬರುವುದಾದರೆ ಅಕ್ಷಯ್ ನಟನೆಯ ‘ಲಕ್ಷ್ಮಿ ಬಾಂಬ್’ ಚಿತ್ರ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ. ಒಟಿಟಿ ಬಿಡುಗಡೆಯಾಗುವ ಅಕ್ಷಯ್ ನಟನೆಯ ಮೊದಲ ಸಿನಿಮಾವಿದು. 

‘ಪೃಥ್ವಿರಾಜ್’‌, ‘ಸೂರ್ಯವಂಶಿ’, ‘ಅಟ್ರಂಗಿ ರೇ’ ಸಿನಿಮಾಗಳು ಇವರ ಕೈಯಲ್ಲಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು