ಯಜಮಾನ ಚಿತ್ರದ ಬಸಣ್ಣಿ ಹಾಡು ಬಿಡುಗಡೆ

7

ಯಜಮಾನ ಚಿತ್ರದ ಬಸಣ್ಣಿ ಹಾಡು ಬಿಡುಗಡೆ

Published:
Updated:

‘ಚಾಲೆಂಜಿಂಗ್‌ ಸ್ಟಾರ್’ ದರ್ಶನ್‌ ನಟನೆಯ ‘ಯಜಮಾನ’ ಚಿತ್ರದ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಭರ್ಜರಿ ಯಶಸ್ಸು ಕಂಡಿವೆ. ಈಗ ಮೂರನೇ ಹಾಡು ‘ಬಸಣ್ಣಿ...’ ಡಿಬೀಟ್ಸ್ ಮ್ಯೂಸಿಕ್‌ನಲ್ಲಿ ಗಣರಾಜ್ಯೋತ್ಸವ ದಿನದಂದು ಬಿಡುಗಡೆಯಾಗಿದೆ.

ಯೋಗರಾಜಭಟ್‌ ಮತ್ತು ಹಾಗೂ ವಿ. ಹರಿಕೃಷ್ಣ ಅವರ ಕಾಂಬಿನೇಷನ್‌ನಡಿ ಮೂಡಿಬರುತ್ತಿರುವ ಹಾಡು ಇದಾಗಿದೆ.

ಈ ಸಾಂಗ್‌ನಲ್ಲಿ ಸಿನಿಮಾದ ಮತ್ತೊಬ್ಬ ನಾಯಕಿ ತಾನ್ಯಾ ಹೋಪ್ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಅವರದು ಬಸಣ್ಣಿ ಪಾತ್ರ. ದರ್ಶನ್ ಹಾಗೂ ರಶ್ಮಿಕಾ ಮಂದಣ್ಣ ಜೊತೆಗೆ ಅವರು ತೆರೆ ಹಂಚಿಕೊಂಡಿದ್ದಾರೆ.
 
ಈ ಸಾಂಗನ್ನು ಸಂಗೀತ ನಿರ್ದೇಶಕ ಹರಿಕೃಷ್ಣ ಅವರೇ ಹಾಡಿದ್ದಾರೆ. ಅವರಿಗೆ ಗಾಯಕಿ ವರ್ಷಾ ಸಾಥ್‌ ನೀಡಿದ್ದಾರೆ. ಚಿತ್ರಕ್ಕೆ ಬಂಡವಾಳ ಹೂಡಿರುವುದು ಶೈಲಜಾ ನಾಗ್ ಹಾಗೂ ಬಿ. ಸುರೇಶ್. ಠಾಕೂರ್ ಅನೂಪ್ ಸಿಂಗ್ ಖಳನಟನಾಗಿ ಕಾಣಿಸಿಕೊಂಡಿದ್ದಾರೆ. ‘ಡಾಲಿ’ ಖ್ಯಾತಿಯ ಧನಂಜಯ್‌ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.  

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !