ಗುರುವಾರ , ಜೂನ್ 24, 2021
21 °C

ಉರಿ ಚಿತ್ರದ ಶೂಟಿಂಗ್ ಸೆಟ್‌ನಲ್ಲಿಯೇ ಶುರುವಾಗಿತ್ತು ಯಾಮಿ-ಆದಿತ್ಯ ಪ್ರೇಮ್‌ ಕಹಾನಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Yami Gautam Instagram

ಬೆಂಗಳೂರು: ನಟಿ ಯಾಮಿ ಗೌತಮ್, ಉರಿ ಚಿತ್ರದ ನಿರ್ದೇಶಕ ಆದಿತ್ಯ ಧಾರ್ ಜತೆಗೆ ಮದುವೆಯಾಗಿದ್ದಾರೆ. ಈ ವಿಚಾರವನ್ನು ಅವರು ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಬಹಿರಂಗಪಡಿಸಿದ್ದಾರೆ.

ಯಾಮಿ ಮತ್ತು ಆದಿತ್ಯ ಧಾರ್ ಮದುವೆ ಬಾಲಿವುಡ್ ಮಂದಿಗೆ ಅಚ್ಚರಿ ಉಂಟುಮಾಡಿದೆ. ಇವರಿಬ್ಬರ ನಡುವಣ ಪ್ರೇಮ ಕಥೆ ಅಲ್ಲಿನವರಿಗೆ ತಿಳಿದೇ ಇರಲಿಲ್ಲವಂತೆ..

ಯಾಮಿ ಮತ್ತು ಆದಿತ್ಯ ಆಪ್ತ ಗೆಳೆಯರಿಗೂ ಮದುವೆ ಸಂಗತಿ ಗೊತ್ತೇ ಇರಲಿಲ್ಲ ಎನ್ನಲಾಗಿದೆ. ಇಬ್ಬರೂ ಕಳೆದ ಮೂರು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು ಎಂದು ವರದಿಗಳು ಹೇಳಿವೆ.

2019ರಲ್ಲಿ ತೆರೆಕಂಡ ಉರಿ ಚಿತ್ರದ ನಿರ್ದೇಶಕರಾಗಿರುವ ಆದಿತ್ಯ ಧಾರ್ ಜತೆಗೆ ನಟಿ ಯಾಮಿ ಗೌತಮ್ ಮದುವೆಯಾಗಿದ್ದು, ಉರಿ ಚಿತ್ರದ ಶೂಟಿಂಗ್ ಆರಂಭವಾದ ಮೊದಲ ದಿನದಿಂದಲೇ ಇಬ್ಬರೂ ಆಪ್ತರಾಗಿದ್ದರು. ಈ ಕುರಿತು ಯಾಮಿ ಮತ್ತು ಆದಿತ್ಯ ಬಹಿರಂಗಪಡಿಸಿಲ್ಲವಾದರೂ, ಇಬ್ಬರನ್ನೂ ಹತ್ತಿರದಿಂದ ಬಲ್ಲವರು ಆದಿತ್ಯ ಮತ್ತು ಯಾಮಿ ನಡುವೆ ಬಂಧನವಿತ್ತು. ಆದರೆ ಎಲ್ಲಿಯೂ ಅವರು ತೋರ್ಪಡಿಸಿಕೊಳ್ಳುತ್ತಿರಲಿಲ್ಲ ಎಂದಿದ್ದಾರೆ.

ಸೇನಾ ಕಾರ್ಯಾಚರಣೆ ಕುರಿತಾದ ಕಥೆ ಹೊಂದಿದ್ದ ಉರಿ ಚಿತ್ರದಲ್ಲಿ ವಿಕ್ಕಿ ಕೌಶಲ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದರು. ಆದಿತ್ಯ ಧಾರ್ ನಿರ್ದೇಶನದ ದಿ ಇಮ್ಮೋರ್ಟಲ್ ಅಶ್ವಥಾಮ ಚಿತ್ರದಲ್ಲಿ ಕೂಡ ವಿಕ್ಕಿ ಕೌಶಲ್ ನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು