ಸೋಮವಾರ, ಆಗಸ್ಟ್ 26, 2019
27 °C

ಅವಾಜ್‌ ಹಾಕಿದ ಯಶ್‌ ಪುತ್ರಿ!: ಫೋಟೊ ವೈರಲ್

Published:
Updated:

‘ರಾಕಿಂಗ್‌ ಸ್ಟಾರ್’ ಯಶ್‌ ಅವರು ‘ಕೆಜಿಎಫ್‌ ಚಾಪ್ಟರ್‌ 2’ ಸಿನಿಮಾ ಶೂಟಿಂಗ್‌ನಲ್ಲಿ ತೊಡಗಿಸಿದ್ದಾರೆ. ಬಿಡುವು ಸಿಕ್ಕಿದಾಗಲೆಲ್ಲಾ ಪುತ್ರಿಯ ಜೊತೆಗೆ ಕಾಲ ಕಳೆಯುತ್ತಾ ಅಪರೂಪದ ಕ್ಷಣಗಳನ್ನು ಫೋಟೊಗಳಲ್ಲಿ ಸೆರೆ ಹಿಡಿಯುತ್ತಾರೆ. ಆ ಮುದ್ದಾದ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಿಗೂ ಅಪ್‌ಲೋಡ್‌ ಮಾಡುತ್ತಾರೆ.

ಇತ್ತೀಚೆಗೆ ಮಗಳೊಂದಿಗೆ ಯಶ್‌ ತೆಗೆಸಿಕೊಂಡಿರುವ ಫೋಟೊವೊಂದು ಭಾರೀ ವೈರಲ್‌ ಆಗಿದೆ. ಅವರ ಮಗಳು ಅವಾಜ್‌ ಹಾಕಿರುವುದೇ ಇದಕ್ಕೆ ಕಾರಣ. ಕ್ಷಮಿಸಿ. ಅಪ್‌ಲೋಡ್‌ ಮಾಡಿರುವ ಫೋಟೊಗೆ ಈ ಅವಾಜ್‌ ರೂಪದ ಶೀರ್ಷಿಕೆ ಬರೆದಿರುವುದು ಯಶ್‌!  ಇನ್‌ಸ್ಟಾಗ್ರಾಂನಲ್ಲಿ ಈ ಫೋಟೊವನ್ನು ಯಶ್‌ ಹರಿಬಿಟ್ಟಿದ್ದಾರೆ. ಅದರ ಕೆಳಗೆ ‘ಇಫ್ ಯು ಥಿಂಕ್ ಯು ಆರ್ ಬ್ಯಾಡ್, ಯು ನೋ ಹೂ ಈಸ್ ಮೈ ಡ್ಯಾಡ್’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಯಶ್‌ ಖಡಕ್‌ ಲುಕ್‌ ನೀಡಿದ್ದು, ಆಯ್ರಾ ಅವಾಜ್‌ ಹಾಕುವ ರೀತಿಯಲ್ಲೇ ಪೋಸ್‌ ನೀಡಿದ್ದಾಳೆ. ಆಕೆಗೆ ಈಗ ಎಂಟು ತಿಂಗಳು ತುಂಬಿದೆ.

‘ಕೆಜಿಎಫ್ ಚಾಪ್ಟರ್‌ 1’ರಲ್ಲಿ ರಾಕಿಂಗ್‌ ಸ್ಟಾರ್ ‘ಇಫ್ ಯು ಥಿಂಕ್ ಯು ಆರ್ ಬ್ಯಾಡ್, ಐ ಆ್ಯಮ್ ಯುವರ್ ಡ್ಯಾಡ್’ ಎಂದು ಡೈಲಾಗ್‌ ಹೇಳುತ್ತಾ ಎದುರಾಳಿಗಳ ವಿರುದ್ಧ ಅಬ್ಬರಿಸಿದ್ದರು. ಈ ಡೈಲಾಗ್‌ ಅನ್ನೇ ಕೊಂಚ ಬದಲಾವಣೆ ಮಾಡಿ ಅವರು ಪೋಸ್ಟ್‌ ಮಾಡಿದ್ದಾರೆ.

Post Comments (+)