ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಬದಿ ಅಂಗಡಿಯಲ್ಲಿ ಐಸ್ ಕ್ರೀಮ್, ಚಾಕೊಲೇಟ್ ಸವಿದ ಯಶ್ ದಂಪತಿ

Published 17 ಫೆಬ್ರುವರಿ 2024, 9:37 IST
Last Updated 17 ಫೆಬ್ರುವರಿ 2024, 9:37 IST
ಅಕ್ಷರ ಗಾತ್ರ

ಭಟ್ಕಳ: ತಾಲ್ಲೂಕಿನ ಚಿತ್ರಾಪುರ ಮಠಕ್ಕೆ ಗುರುವಾರ ರಾತ್ರಿ ಆಗಮಿಸಿದ್ದ ಚಿತ್ರನಟ ಯಶ್ ಚಿತ್ರಾಪುರದಲ್ಲಿರುವ ಸಣ್ಣ ಕಿರಾಣಿ ಅಂಗಡಿಯಿಂದ ಮಗಳಿಗೆ ಚಾಕಲೊಟ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಅವರಿಗೆ ಐಸ್‌ ಕ್ಯಾಂಡಿ ಕೊಡಿಸಿದ್ದಾರೆ. ದಂಪತಿಯು ಅಂಗಡಿಯ ಎದುರು ನಿಂತ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಸಿನಿಮಾ ಚಿತ್ರೀಕರಣದ ಒತ್ತಡದ ನಡುವೆಯೂ ವರ್ಷಕ್ಕೆ ಒಮ್ಮೆ ಚಿತ್ರಾಪುರ ಮಠಕ್ಕೆ ಭೇಟಿ ನೀಡುತ್ತಾರೆ. ಈ ಬಾರಿಯೂ ಮಠಕ್ಕೆ ಭೇಟಿ ನೀಡಿದ್ದ ಅವರು ಒಂದು ದಿನ ಅಲ್ಲಿಯೇ ತಂಗಿದ್ದರು. ಶುಕ್ರವಾರ ಮಠದಿಂದ ತೆರಳಿದ್ದಾರೆ.

ಕಿರಾಣಿ ಅಂಗಡಿಯ ಕಟ್ಟೆಯ ಮೇಲೆ ಸ್ಟಾರ್ ನಟಿ ರಾಧಿಕಾ ಕುಳಿತು ಐಸ್‌ಕ್ಯಾಂಡಿ ಸವಿಯುತ್ತಿದ್ದರೆ, ಯಶ್ ಅಂಗಡಿಯಲ್ಲಿ ವ್ಯವಹರಿಸುತ್ತಿರುವ ಚಿತ್ರವು ತಡವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದೆ. ಸ್ಟಾರ್ ನಟನ ಸರಳತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT